ಪ್ರಮುಖ ಸುದ್ದಿ

ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಸಹಕಾರಿ – ಮುದ್ನೂರ

ಎನ್ನೆಸ್ಸೆಸ್ ದೇಶಭಕ್ತಿ ಬೆಳೆಸುವ ಕೇಂದ್ರ

ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಸಹಕಾರಿ – ಮುದ್ನೂರ

ಎನ್ನೆಸ್ಸೆಸ್ ದೇಶಭಕ್ತಿ ಬೆಳೆಸುವ ಕೇಂದ್ರ

yadgiri, ಶಹಾಪುರಃ ಎನ್ನೆಸ್ಸೆಸ್ ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನ ಹೊಂದುವದರಲ್ಲಿ ಸಂಶಯವೇ ಇಲ್ಲ. ಶಿಬಿರದಲ್ಲಿ ಮಾರ್ಗದರ್ಶಕರ ಸಲಹೆ ಸೂಚನೆಯಂತೆ ಕೆಲಸ ಮಾಡುವ ಮೂಲಕ ದೇಶ ಭಕ್ತಿ ಪ್ರೇರಣೆ ಪಡೆಯುವ ಜೊತೆಗೆ ದೇಶದ ಅಭಿವೃದ್ಧಿಗೆ ಶಿಸ್ತುಬದ್ಧವಾಗಿ ಸೇವಾ ಮನೋಭಾವದಿಂದ ಕೆಲಸ ಮಾಡವದನ್ನು ಕಲಿಯುತ್ತೀರಿ ಇದರಿಂದ ನಿಮ್ಮ ಬದುಕು ಉತ್ತಮವಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ತಿಳಿಸಿದರು.

ತಾಲೂಕಿನ ಸುಕ್ಷೇತ್ರ ದಿಗ್ಗಿ ಗ್ರಾಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವತಿಯಿಂದ ಆಯೋಜಿಸಿದ್ದ 2021-22 ನೇ ಸಾಲಿನ ಎನ್ನೆಸ್ಸೆಸ್ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಬಿರದಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳೆಯುತ್ತದೆ. ದೇಶದ ಪ್ರಗತಿಗೆ ನಾವೆಲ್ಲ ಮಾಡುವ ಕೆಲಸವೇನು.? ಗ್ರಾಮೀಣ ಭಾಗದ ಅಭಿವೃದ್ಧಿ ಹೇಗೆ.? ಅಲ್ಲಿನ ಸಮಸ್ಯೆಗಳಿಗೆ ಪರಿಹಾರವೇನು.? ಮತ್ತು ಅದರಲ್ಲಿ ವಿದ್ಯಾರ್ಥಿಗಳ ಕೆಲಸವೇನು.? ಎಂಬುದನ್ನು ಅರ್ಥೈಸಲಾಗುತ್ತದೆ. ಶಿಬಿರ ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲಿದ್ದು, ವಿದ್ಯಾರ್ಥಿಯೋರ್ವ ಸಾರ್ಥಕ ಜೀವನ ನಡೆಸಲು ಎನ್ನೆಸ್ಸೆಸ್ ಅಗತ್ಯವಿದೆ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸೇವಾಮನೋಭಾವದಿಂದ ಕೆಲಸ ಮಾಡಬೇಕೆಂದರು.

ಪ್ರಾಂಶುಪಾಲ ಪ್ರೋ.ಚನ್ನಾರಡ್ಡಿ ಎಂ. ತಂಗಡಗಿ ಮಾತನಾಡಿ, ಇಂದಿನ ಪೀಳಿಗೆ ಗ್ರಾಮೀಣ ಭಾಗದಿಂದ ವಿಮುಖರಾಗುತ್ತಿದ್ದಾರೆ. ಹಾಗಾಗಾಬಾರದು ಅವರು ಗ್ರಾಮೀಣ ಪ್ರದೇಶದ ಜೀವನಶೈಲಿ, ಸಂಸ್ಕøತಿ ಕಲಿಯಲು ಈ ಎನ್ನೆಸ್ಸೆಸ್ ಸಹಕಾರಿ ಆಗಿದ್ದು, ಅವರನ್ನು ಗ್ರಾಮೀಣ ಭಾಗದ ಕಡೆಗೆ ಅಭಿಮುಖವಾಗಿಸಲು ಉತ್ತಮ ವೇದಿಕೆಯಾಗಿದೆ. ಉತ್ತಮವಾದ ಕಲಿಕೆ ಎಂದಿಗೂ ಅರ್ಥವಾಗುವುದಿಲ್ಲ. ವೃದ್ಧರು, ಗರ್ಭಿಣಿಯರು ವಿಶೆಷ ಚೇತನರಿಗೆರಿಗೆ ಬಸವೊಂದರಲ್ಲಿ ಆಸನ ಬಿಟ್ಟುಕೊಡುವುದು, ರಸ್ತೆ ದಾಟಿಸಲು ಸಹಾಯ ಮಾಡುವುದು, ಬಿದ್ದವರನ್ನು ಮೇಲೆತ್ತುವುದು ಸಣ್ಣ ಪುಟ್ಟ ಕೆಲಸವೆ ಆದರೂ ಅವುಗಳು ದೇಶಸೇವೆಯ ಭಾಗವಾಗಿದೆ. ಪ್ರತಿಯೊಬ್ಬರಲ್ಲೂ ಸಹನೆ, ಸಹಭಾಳ್ವೆ, ಸಹಕಾರದೊಂದಿಗೆ ಸಂತಸದ ಜೀವನದ ದಾರಿಯನ್ನು ಕಲಿಸುತ್ತದೆ.

ಶಿಬಿರದ ಯೋಜನೆಯನ್ನು ಎಲ್ಲಾ ಕಲಿಕಾರ್ಥಿಗಳು ಸರಿಯಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕÀ ಬಸವರಾಜ ಕಡಗಂಚಿ, ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಆನಂದ ಸಾಸನೂರ, ಡಾ.ನಾಗಪ್ಪ ಚವಳಕರ್, ಬಸವರಾಜ ಛಲವಾದಿ, ಉದಯ ಕುಮಾರ ಟೊಣಪೆ, ಅಂತರಾಷ್ಟ್ರೀಯ ಯೋಗಪಟು ಮಹೇಶ, ರಂಜಿತ್, ಉಪನ್ಯಾಸಕ ಶರಣಪ್ಪ ಸಂಘರ್ಷ ಇತರರಿದ್ದರು. ವಿದ್ಯಾರ್ಥಿನಿಯರಾದ ಸೌಮ್ಯ ಚಟ್ರಿಕಿ ಮತ್ತು ಸರಸ್ವತಿ ಶಾರದಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button