ದೇಶದಲ್ಲಿಯೇ ಮೊದಲ ಓಮಿಕ್ರಾನ್ ಪ್ರಕರಣ ಕರ್ನಾಟಕದಲ್ಲಿ ಪತ್ತೆ

ಕರ್ನಾಟಕದ ಇಬ್ಬರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢ
ನವದೆಹಲಿಃ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಪ್ರಕರಣ ದೇಶದಲ್ಲಿಯೇ ಮೊದಲು ಕರ್ನಾಟಕದ ಇಬ್ಬರಲ್ಲಿ ಪತ್ತೆಯಾಗಿದೆ. ಕೊರೊನಾ ಆತಂಕ ತೀವ್ರತೆ ನಡುವೆ ಕರ್ನಾಟಕದಲ್ಲಿಯೇ ರೂಪಾಂತರಿ ಕೊರೊನಾ ಓಮಿಕ್ರಾನ್ ಪತ್ತೆಯಾಗಿರುವ ಆಘಾತಕಾರ ವಿಷಯವನ್ನು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ, ದೇಶದಲ್ಲಿಯೇ ಮೊದಲ ಓಮಿಕ್ರಾನ್ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಆಫ್ರಿಕಾದಿಂದ ಬಂದಿದ್ದ ಇಬ್ಬರಲ್ಲಿ ಈ ಹೊಸ ರೂಪಾಂತರಿ ತಳಿ ಪತ್ತೆಯಾಗಿದೆ ಎಂದು ವಿವರಿಸಿದ್ದಾರೆ, 66 ವರ್ಷದ ವೃದ್ಧ ಮತ್ತು 46 ವರ್ಷದ ವ್ಯಕ್ತಿಯೋರ್ವನಲ್ಲಿ ಓಮಿಕ್ರಾನ್ ವೈರಸ್ ತಗುಲಿರುವದು ದೃಢವಾಗಿದೆ.
ಈ ಹಿಂದೆಯೂ ಕೊರೊನಾ ವೈರಸ್ ದೇಶದಲ್ಲಿಯೇ ಮೊದಲು ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯಲ್ಲಿ ಪತ್ತೆಯಾಗಿರುವದು ಅಲ್ಲದೆ ಮೊದಲ ಸಾವು ಸಂಭವಿಸಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಓಮಿಕ್ರಾನ್ ಸೋಂಕಿತರು ಆಫ್ರೀಕಾದಿಂದ ಬಂದವರಾಗಿದ್ದು, ಅವರು ಬೆಂಗಳೂರಿನ ಯಾವ ಪ್ರದೇಶದಲ್ಲಿ ವಾಸವಿದ್ದಾರೆ ಎಂಬುದನ್ನು ಅಧಿಕಾರಿಗಳು ನಿಖರ ಮಾಹಿತಿ ನೀಡಿರುವದಿಲ್ಲ. ಆದರೆ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.