ಪ್ರಮುಖ ಸುದ್ದಿ
ಓಮಿಕ್ರಾನ್ಃ ಮುಂಬೈನಲ್ಲಿ 48 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ

ಮುಂಬೈನಲ್ಲಿ ಹೆಚ್ಚಿದ ಓಮಿಕ್ರಾನ್ ಆತಂಕ, 48 ಗಂಟೆ ನಗರದಲ್ಲಿ 144 ಜಾರಿ
ಮುಂಬೈಃ ನಗರದಲ್ಲಿ ಓಮಿಕ್ರಾನ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂದಿನ 48 ಗಂಟೆವರೆಗೆ ನಗರದಲ್ಲಿ CRPC ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಲ್ಲದೆ ವೀಕೆಂಡ್ ನಲ್ಲಿ ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸುವಂತಿಲ್ಲ. ಸಮಾರಂಭ, ಡಿನ್ನರ್ ಪಾರ್ಟಿಗಳಿಗೆ ನಿರ್ಬಂಧ ಹೇರಲಾಗಿದೆ.
ಅಲ್ಲದೆ ಮುಂದಿನ ಎರಡು ದಿನಗಳವರೆಗೆ ಯಾವುದೇ ರ್ಯಾಲಿ, ಪ್ರತಿಭಟನಾ ಮೆರವಣಿಗೆಗಳು ನಡೆಸದಂತೆ ನಿರ್ಬಂಧಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದೇಶ ಉಲ್ಲಂಘಿಸಿದಲ್ಲಿ ಐಪಿಸಿ ಕಲಂ 188 ರನ್ವಯ ಕಾನೂನಾತ್ಮಕ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.