Homeಪ್ರಮುಖ ಸುದ್ದಿಮಹಿಳಾ ವಾಣಿ
ಪಾಲಕ್ ಬಿರಿಯಾನಿ ಒಮ್ಮೆ ಟ್ರೈ ಮಾಡಿ ನೋಡಿ
ಬೇಕಾಗುವ ಪದಾರ್ಥಗಳು…
- ಗೋಡಂಬಿ-ಸ್ವಲ್ಪ
- ತುಪ್ಪ- 2 ಚಮಚ
- ಚಕ್ಕೆ- 2-4
- ಲವಂಗ-2
- ಏಲಕ್ಕಿ-2
- ಜೀರಿಗೆ-1 ಸ್ವಲ್ಪ
- ಶುಂಠಿ ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
- ಈರುಳ್ಳಿ ಉದ್ದಕ್ಕೆ ಸೀಳಿಕೊಳ್ಳಿ- 1
- ಪಾಲಾಕ್ ಸೊಪ್ಪು- 3 ಬಟ್ಟಲು (ತೊಳೆದು ಸಣ್ಣಗೆ ಹೆಚ್ಚಿಕೊಂಡಿದ್ದು)
- ಖಾರದ ಪುಡಿ, ½ ಚಮಚ
- ಅರಿಶಿನ ಪುಡಿ- ಸ್ವಲ್ಪ
- ದನಿಯಾ ಪುಡಿ- 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಪನ್ನೀರ್- (ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು)
- ಮೊಸರು- 3 ಚಮಚ
- ಬಾಸುಮತಿ ಅಕ್ಕಿ
ಮಾಡುವ ವಿಧಾನ…
- ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಹಾಕಿ 2 ಕಪ್ ನೀರು ಹಾಕಿ 1 ವಿಷಲ್ ಕೂಗಿಸಿಕೊಳ್ಳಿ.
- ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
- ನಂತರ ಕತ್ತರಿಸಿದ ಪಾಲಾಕ್ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ದನಿಯಾ ಪುಡಿ, ಉಪ್ಪು, ಮೊಸರು ಹಾಕಿ ಮಿಕ್ಸ್ ಮಾಡಿ.
- ನಂತರ ತುರಿದ ಪನ್ನೀರ್ ಸೇರಿಸಿ ನಿಧಾನಕ್ಕೆ ಮಿಕ್ಸ್ ಮಾಡಿ ಇದಕ್ಕೆ ಅನ್ನ ಹಾಕಿ ಎಲ್ಲಾ ಸರಿಹೊಂದುವಂತೆ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ನಂತರ ತುಪ್ಪದಲ್ಲಿ ಫ್ರೈ ಮಾಡಿದ ಗೋಡಂಬಿಯೊಂದಿಗೆ ಅಲಂಕರಿಸಿದರೆ ರುಚಿಕರವಾದ ಪಾಲಾಕ್ ಬಿರಿಯಾನಿ ಸವಿಯಲು ಸಿದ್ಧ.