ಪ್ರಮುಖ ಸುದ್ದಿ

ಹೊಸೂರಲ್ಲಿ ಪೋಷಣ ಅಭಿಯಾನಃ ಗರ್ಭೀಣಿಯರಿಗೆ ಸೀಮಂತ ಕಾರ್ಯಕ್ರಮ

ಉತ್ತಮ ಆರೋಗ್ಯಕ್ಕೆ ಹಣ್ಣು, ತರಕಾರಿ ಸೇವನೆ ಅಗತ್ಯ

yadgiri, ಶಹಾಪುರ: ಮಹಿಳೆಯರು ಉತ್ತಮ ಪೋಷಕಾಂಶಗಳುಳ್ಳ ತರಕಾರಿ, ಹಣ್ಣು ಹಂಪಲು ಸೇವಿಸಬೇಕು. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮಖ್ಯೋಪಾಧ್ಯಯ ಚಿದಾನಂದ ಹಿರೇಮಠ ತಿಳಿಸಿದರು.

ತಾಲೂಕಿನ ಹೊಸುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ  ಪೋಷಣ ಅಭಿಯಾನ, ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರೋಟೀನ್‍ಯುಕ್ತ ಆಹಾರ ಸೇವನೆಯಿಂದ ಮನುಷ್ಯ ಆರೋಗ್ಯವಾಗಿದ್ದು ಸದೃಢಕಾಯ ಹೊಂದಿರಲು ಸಾಧ್ಯವಿದೆ. ಸೊಪ್ಪು, ತಾಜಾ ತರಕಾರಿ, ಹಣ್ಣುಗಳ ಜತೆ ಮೊಳಕೆಕಾಳು ಉಪಯೋಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು, ಆರೋಗ್ಯವಂತರನ್ನಾಗಿ ರೂಪಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವರು ಪೋಷಣ ಅಭಿಯಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಪರಿಣಾಮಕಾರಿಯಾಗಿ ಅನುμÁ್ಠನಕ್ಕೆ ಶ್ರಮಿಸುತ್ತಿದ್ದಾರೆ ಎಂದರು.

ಶಿರವಾಳ ಪಿಎಚ್‍ಸಿ ಆರೋಗ್ಯ ಇಲಾಖೆಯ ಸುಧಾ ಮಾತನಾಡಿ, ಕೊರೊನಾ ನಿಯಂತ್ರಿಸುವಲ್ಲಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಗರ್ಭಿಣಿಯರು ಕೂಡ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಯಾವುದೇ ತೊಂದರೆಯಾಗುವದಿಲ್ಲ. ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನತೆ ಮುಂದೆ ಬರುತಿಲ್ಲ. ಗ್ರಾಮದ ಮುಖಂಡರು, ಸಂಘ ಸಂಸ್ಥೆಯವರು ಜನತೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರ ವ್ಯಾಪ್ತಿಯ ಗರ್ಭಿಣಿ ಮಹಿಳೆಯರಿಗೆ ಸೀಮಂತ ಮಾಡಲಾಯಿತು, ಮೊಳಕೆ ಕಾಳು, ಪೋಷಕಾಂಶಯುಕ್ತ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣುಗಳ ಪ್ರದರ್ಶನ, ಮನೆ ಅಂಗಳಗಳಲ್ಲಿ ತರಕಾರಿ ಬೀಜಗಳ ಬಿತ್ತನೆ ಮಾಡಿ ಸಾವಯವ ತರಕಾರಿ ಬೆಳಸಿ ಕೈತೋಟ ಮಾಡುವ ಬಗ್ಗೆ ವಿವರಿಸಲಾಯಿತು.

ಶಿಕ್ಷಕ ಪರಶುರಾಮ್, ಪ್ರಮುಖರಾದ ಮಹದೇವಪ್ಪಗೌಡ ಸಾಸನೂರ, ಗುರುಸಂಗಪ್ಪ ಕೋಳೂರ, ಶರಣು ಚಿಂಚೋಳಿ, ಅಂಗನವಾಡಿ ಕಾರ್ಯಕರ್ತೆಯರಾದ ಮೈತ್ರಾ ಪಾಟೀಲ್, ಗೀತಾ ಚಿಂಚೋಳಿ, ಗಂಗಮ್ಮ, ಲಲಿತಾ ಸೇರಿದಂತೆ ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಫಲಾನುಭವಿ ಮಹಿಳೆಯರು, ಮಕ್ಕಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button