ಪೌರ ನೌಕರರ ಸಂಘದ ಅಧ್ಯಕ್ಷರಾಗಿ ಶರಣು ಆಯ್ಕೆ
yadgiri, ಶಹಾಪುರಃ ಇಲ್ಲಿನ ನಗರಸಭೆ ಶಾಖೆಯ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶರಣು ನರಿಬೋಳಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೇಯನ್ನು ಪೌರಾಯುಕ್ತರ ಸಮ್ಮುಖದಲ್ಲಿ ಸ0ಘದ ನೂರಾರು ಸದಸ್ಯರ ಉಪಸ್ಥಿತಿಯಲ್ಲಿ ಸಂಘದ 17 ಜನ ನಿರ್ದೇಶಕರು ಕೈ ಎತ್ತುವ ಮೂಲಕ ಶರಣು ನರಿಬೋಳಿ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾಗಿ ಸುರೇಂದ್ರ ಕರಕಳ್ಳಿ, ಉಪಾಧ್ಯಕ್ಷರಾಗಿ ಮರೆಮ್ಮ ಗೋಗಿ, ಪ್ರಧಾನ ಕಾರ್ಯದರ್ಶಿಯಾಗಿ ಹಣಮಂತ ಯಾದವ್, ಖಜಾಂಚಿಯಾಗಿ ಶರಣಬಸವ ಶೆಟ್ಟಿಗೇರಾ ಅವರನ್ನು ಸರ್ವಾನುಮತದಿಂದ ನೇಮಿಸಲಾಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ರಮೇಶ ಬಡಿಗೇರ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾನಾಸಾಬ ಮಡಿವಾಳ, ಪರಿಸರ ಅಭಿಯಂತರ ಹರೀಶ್ ಸಜ್ಜನ್ ಶೆಟ್ಟಿ, ದುರ್ಗಪ್ಪ ನಾಯಕ, ದೇವಪ್ಪ ಗುಡಿ, ವೀರನಗೌಡ, ಆನಂದ ಬಿದರಾಣಿ, ರಮೇಶ ಚಟ್ರಿಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಶರಣು ನರಿಬೋಳಿ ಅವರನ್ನು ಪೌರಾಯಕ್ತರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಶರಣು ನರಿಬೋಳಿ, ಕೊಟ್ಟ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ನಗರಸಭೆ ಪೌರಾಯುಕ್ತರು ಸೇರಿದಂತೆ ಎಲ್ಲಾ ಹಿರಿಯ ಸಿಬ್ಬಂದಿ ವರ್ಗವ ಸಲಹೆ ಸೂಚನೆ ಮಾರ್ಗದರ್ಶನ ಮೇರೆಗೆ ಮುಂದಿನ ಚಟುವಟಿಕೆಗಳನ್ನು ನಡೆಸುತ್ತೇನೆ ಎಂದು ಭರವಸೇ ನೀಡಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.