ವಿನಯ ವಿಶೇಷ

ಕನ್ನಡ ಅವಜ್ಞೆ – ಅವಮಾನಕ್ಕೆ ಒಳಗಾದ ಭಾಷೆ – ಲೇಖಕ ಹಿರೇಮಠ ಬರಹ

ಕನ್ನಡ ಅವಜ್ಞೆ – ಅವಮಾನಕ್ಕೆ ಒಳಗಾದ ಭಾಷೆ

ನ್ನಡವನ್ನು ತಿರಸ್ಕರಿಸುವ, ಕೀಳಾಗಿ ನೋಡುವ ಗೂಗಲ್ ಕಂಪನಿ ಬೇರೊಂದು ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಇಂತಹ ಹೇಳಿಕೆ ನೀಡಿರುವುದು, ಅದಕ್ಕೆ ಕನ್ನಡ ಸಂಸ್ಕೃತಿ, ಭಾಷೆಯ ಪರಿಜ್ಞಾನದ ಕೊರತೆ ಇದೆ.

ಇತಿಹಾಸದುದ್ದಕ್ಕೂ ದ್ರಾವಿಡ ಭಾಷೆಗಳು ಮುಖ್ಯವಾಗಿ ಕನ್ನಡ ಅವಜ್ಞೆ ಹಾಗೂ ಅವಮಾನಕ್ಕೆ ಒಳಗಾಗುತ್ತಲೇ ಬಂದಿವೆ. ಕಾರಣ, ಕನ್ನಡಿಗರಿಗೆ ಭಾಷಾಭಿಮಾನದ ಕೊರತೆ! ತಮಿಳರಿಗೆ ಇರುವಷ್ಟು ಭಾಷಾಭಿಮಾನ ಕನ್ನಡಿಗರಿಗೆ ಇಲ್ಲ. ಏಕೆಂದರೆ ನಮ್ಮ ಪಂಡಿತರು, ವಿದ್ವಾಂಸರು ಭಾಷೆಯ ಚರಿತ್ರೆ ಕುರಿತು ಕಟ್ಟಿಕೊಡುವ ಕಾರ್ಯ ಮಾಡಲೇ ಇಲ್ಲ. ಹಲ್ಮಿಡಿ ಶಾಸನ ಪೂರ್ವದಲ್ಲಿಯೇ ಕನ್ನಡ ಬಳಕೆ ಕುರಿತು ನಮಗೆ ಮಾಹಿತಿಯ ಸ್ಪಷ್ಟತೆ ಇಲ್ಲ. ತಮಿಳರಲ್ಲಿ ಅಂತಹ ಸಾಹಿತ್ಯ ರಚನೆ ಆಗಿದೆ.

ಮಾರ್ಗಕಾರನಿಂದ ಇಂದಿಈನವರೆಗೆ ನಾವು ಬೇರೆ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಚರಿತ್ರೆಯಾಗಿ ಕಟ್ಟಿಕೊಡುವ ಕಾರ್ಯ ಮಾಡಲೇ ಇಲ್ಲ. ಕವಿರಾಜಮಾರ್ಗದ ಕೃತಿಕಾರ ಸಂಸ್ಕ್ರುತ ಭಾಷೆಯ ಮೋಹಕ್ಕೆ ಒಳಗಾದರೆ ನಾವು, ನಮ್ಮ ಮಕ್ಕಳು ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ಇನ್ನು ಕನ್ನಡ ನಮ್ಮ ಅನ್ನದ ಭಾಷೆಯಾಗಿ, ಹೃದಯ ಭಾಷೆಯಾಗಿ, ತಾಯಿ ಭಾಷೆಯಾಗಿ ಉಳಿಯುವುದಾದರೂ ಹೇಗೆ? ಮತ್ತು ಯಾವಾಗ?

ಕನ್ನಡದ ರೀತಿಯಲ್ಲಿ ಗೂಗಲ್ ಏನಾದರೂ, ತಮಿಳು ಭಾಷೆಯನ್ನು ಟೀಕಿಸಿದ್ದರೆ ಅದರ ಕತೆಯೆ ಬೇರೆ ಆಗತ್ತಿತ್ತು. ಅವರು ಇಷ್ಟೊತ್ತಿಗೆ ಗೂಗಲ್ ಕಂಪನಿಯನ್ನು ಸುಟ್ಟು ಹಾಕುತ್ತಿದ್ದರು. ತಾವು ಚೆನ್ನಾಗಿ ಹೇಳಿದ್ದೀರಿ.ಉ ನನಗೆ ಮೆಚ್ಚುಗೆ ಆಯಿತು. ಆರ್ಯ ಸಂಸ್ಕೃತಿ ಜನ ನಮ್ಮ ಭಾಷೆಗೆ ನಿರಂತರ ಅಪಮಾನ ಮಾಡುವುದನ್ನು ಸಹಿಸುವುದು ಹೇಗೆ? ಕನ್ನಡಿಗರಾದ ನಮಗೆ ನಮ್ಮ ಭಾಷೆ ಬಗ್ಗೆ ಅಭಿಮಾನವಿರಲಿ, ಹೋರಾಟ ಮನೋಭಾವಿರಲಿ. ತಮಗೆ ಅಭಿನಂದನೆಗಳು.

ಪ್ರೊ. ಗಂಗಾಧರಯ್ಯ ಹಿರೇಮಠ.
ಪ್ರಾಧ್ಯಾಪಕರು, ಸರ್ಕಾರಿ ಪ್ರ.ದ. ಕಾಲೇಜು
ದಾವಣಗೆರೆ.
ಮೊ: +91 98800 93613.

Related Articles

Leave a Reply

Your email address will not be published. Required fields are marked *

Back to top button