ಪ್ರಮುಖ ಸುದ್ದಿ

ಚಿತ್ರನಟ ಸುದೀಪಗೆ ಅವಹೇಳನಃ ಆರೋಪಿಗಳ ಬಂಧನಕ್ಕೆ ಆಗ್ರಹ

ಚಿತ್ರನಟ ಸುದೀಪಗೆ ಅವಹೇಳನಃ ಆರೋಪಿಗಳ ಬಂಧನಕ್ಕೆ ಆಗ್ರಹ

ಶಹಾಪುರ: ಸಾಮಾಜಿಕ ಜಾಲತಾಣದಲ್ಲಿ ನಟೇಶ ಎಂಬ ಹೆಸರಿನ ಫೇಸ್ ಖಾತೆ ಮೂಲಕ ಕನ್ನಡದ ಮೇರುನಟ ಕಿಚ್ಚ ಸುದೀಪರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡುವದು ಮತ್ತು ಜಾತಿ ನಿಂದನೆ ಮಾಡುತ್ತಿರುವ ಆರೋಪಿಗಳನ್ನು ಈ ಕೂಡಲೇ ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ಅಖಿಲ ಕರ್ನಾಟಕ ವಾಲ್ಮೀಕ ರತ್ನ ಬಾದ್ ಶಾ ಕಿಚ್ಚ ಸುದೀಪ ಸೇನೆ ಪ್ರತಿಭಟನೆ ನಡೆಸಿ ತಹಸೀಲ್ದಾರ ಜಗನ್ನಾಥರಡ್ಡಿ ಅವರಿಗೆ ಮನವಿ ಸಲ್ಲಿಸಿತು.

ಸಾಮಾಜಿಕ ಕಾಳಜಿಯುಳ್ಳ ಹಾಗೂ ವಾಲ್ಮೀಕಿ ನಾಯಕ ಸಮುದಾಯದ ಪ್ರತಿಭೆ ಆಗಿರುವ ಸುದೀಪ ಹಾಗೂ ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಟೀಕೆ ಮಾಡುವ ಮೂಲಕ ಸಾಮಾಜಿಕ ಶಾಂತಿ ಕದಡುವ ಕೆಲಸ ಮಾಡುತ್ತಿರುವ ದುಷ್ಟಶಕ್ತಿಗಳನ್ನು ತಕ್ಷಣ ಬಂಧಿಸಬೇಕು ಎಂದು ಸೇನೆಯ ಮುಖಂಡರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಮಹೇಶ ಭಂಗಿ, ಅಶೋಕ ಯಕ್ಷಿಂತಿ, ಮಲ್ಲಪ್ಪ ಅರಳಹಳ್ಳಿ, ಮಾನಶಪ್ಪ ನಾಗನಟಗಿ, ಅಂಬಲಯ್ಯ ನಾಗನಟಗಿ, ಆನಂದ ಹಳಿಸಗರ, ವರದ, ನಾಗರಾಜ, ಹಣಮಗೌಡ ಮರಕಲ್, ಬಾಲು, ಸುಭಾಸ, ತಿರುಪತಿ ಯಕ್ಷಿಂತಿ, ದೇವಪ್ಪ ಗಂಗನಾಳ, ಹಣಮಂತ ಇದ್ದರು.

 

Related Articles

Leave a Reply

Your email address will not be published. Required fields are marked *

Back to top button