ತರಕಾರಿ ಮಾರಾಟಗಾರರ ಮೇಲೆ ದರ್ಪ ತೋರಿದ್ದ ಪಿಎಸ್ ಅಮಾನತು
ತರಕಾರಿ ಮಾರಾಟಗಾರರ ಮೇಲೆ ದರ್ಪ ತೋರಿದ್ದ ಪಿಎಸ್ಐ ಆಝಮ್ ಅಮಾನತು
ರಾಯಚೂರಃ ಲಾಕ್ ಡೌನ್ ಹಿನ್ನೆಲೆ ಬೀದಿ ಬದಿ ತರಕಾರಿ ಮಾರಾಟ ಮಾಡುವವರ ಮೇಲೆ ದರ್ಪ ತೋರಿ ಬೂಟುಗಾಲಿನಿಂದ ಒದ್ದು ತರಕಾರಿ ಚಲ್ಲಾ ಪಿಲ್ಲಾ ಮಾಡಿದ್ದ ಸದರ ಬಜಾರ ಠಾಣೆ ಪಿಎಸ್ಐ ಆಝಮ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆಗೆ ಸರ್ಕಾರ ಆದೇಶವೇನು ನೀಡಿದ್ದು, ಸಮಯ ನಿಗದಿ ಪಡಿಸಿದೆ. ಅಲ್ಲದೆ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ವೀಕ್ ಎಂಡ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ.
ಇದನ್ನೆ ನೆಪ ಮಾಡಿಕೊಂಡು ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಬೀದಿ ಬದಿ ತರಕಾರಿ ಮಾರಾಟ ಮಾಡುವವರಿಗೆ ಪಿಎಸ್ಐ ವೀಕ್‌ಎಂಡ್ ಲಾಕ್ ಡೌನ್ ಜಾರಿ ಇದ್ದು ತರಕಾರಿ ಮಾರುವಂತಿಲ್ಲ ಎದ್ದೇಳೆ ಎಂದು ಪೊಲೀಸ್ ಬಾಯಿಯಲ್ಲಿ ಚೀರುತ್ತಾ ಬೀದಿ ಬದಿ ಇಟ್ಟಿದ್ದ ತರಕಾರಿಗಳ ಪುಟ್ಟಿಗಳನ್ನು ಬೂಟುಗಾಲಿಂದ ಒಂದ್ದು ಚಲ್ಲಾಪಿಲ್ಲಿ ಮಾಡಿ ದರ್ಪ ತೋರಿರುವದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಲ್ಲದೆ ಈ ಘಟನೆ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಕೊರೊನಾ ಸಂಕಷ್ಟ ಕಾಲದಲ್ಲಿ ತರಕಾರಿ ಮಾರಿ ಬದುಕು ನಡೆಸುವದು ಕಷ್ಟಕರವಾಗಿದೆ.
ವ್ಯಾಪಾರ ನಡೆಯದಿದ್ದರೆ ಉಪವಾಸ ಬೀಳುವ ಸ್ಥಿತಿಯಲ್ಲಿ ಅವರಿದ್ದು, ಅಂತವರ ಮೇಲೆ ಒಣ ದರ್ಪ ತೋರಿರುವದು ಸರಿಯಲ್ಲ ಎಂಬುದು ನಾಗರಿಕರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆ ಪಿಎಸ್ಐ ಅಮಾನತುಗೊಂಡಿದ್ದಾರೆ ಎನ್ನಲಾಗಿದೆ.