ಪ್ರಮುಖ ಸುದ್ದಿ
ಪುನೀತ್ ರಾಜಕುಮಾರ ಇನ್ನಿಲ್ಲ, ಕಣ್ಣೀರಲ್ಲಿ ದೊಡ್ಮನೆ

ಪುನೀತ್ ರಾಜಕುಮಾರ ಇನ್ನಿಲ್ಲ, ಕಣ್ಣೀರಲ್ಲಿ ದೊಡ್ಮನೆ
ವಿವಿ ಡೆಸ್ಕ್ಃ ಕನ್ನಡ ಚಿತ್ರರಂಗದ ನಟ ಅಪ್ಪು ವಿಧಿಯಾಟಕ್ಕೆ ಬಲಿಯಾಗಿದ್ದು, ದೊಡ್ಮನೆ ಕುಟುಂಬ ಸೇರಿದಂತೆ ಇಡಿ ಸ್ಯಾಂಡಲ್ ವುಡ್ ಕಣ್ಣೀರಿನಲ್ಲಿ ಮುಳುಗಿದೆ.
ತಂದೆ ಡಾ.ರಾಜಕುಮಾರ ರಂತೆ ಸಾವಿನ ನಂತರ ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದು, ಪುನೀತ್ ಎಲ್ಲರ ಪ್ರೀತಿ ಪಾತ್ರರಾಗಿದ್ದರು, ನಿಜವಾಗಲೂ ದೊಡ್ಮನೆ ಅಲ್ಲದೆ ಸ್ಯಾಂಡಲ್ ವುಡ್ ಗೆ ಅವರೊಬ್ಬ ಪವರ್ ಸ್ಟಾರ್ ಆಗಿದ್ದರು.
ಆದರೆ ವಿಧಿಯಾಟ ಇಂದು ಹೃದಯಾಘಾತದ ಮೂಲಕ ಅವರನ್ನು ಕಣ್ಮರೆ ಮಾಡಿದ್ದು, ನಾಡಿನ ಅಪಾರ ಸಂಖ್ಯೆಯ ಅಭಿಮಾನಿ ಬಳಗ, ಸಂಬಂಧಿಕರು ಹಿತೈಷಿಗಳಲ್ಲಿ ದುಃಖ ಮಡುಗಟ್ಟಿದೆ.
ಕನಸಲ್ಲೂ ಅವರು ಸಾವಿನ ಬಗ್ಗೆ ಊಹಿಸಲಾಸಾದ್ಯ ಸಂದರ್ಭದಲ್ಲಿ ಇಷ್ಟು ಬೇಗನೆ ವಿಧಿ ಅವರನ್ನು ಕರೆದೊಯ್ದಿರುವದು ಕನ್ನಡ ಚಿತ್ರರಂಗ ತುಂಬಾಲಾರದ ನಷ್ಟವಾಗಿದೆ.