ಪ್ರಮುಖ ಸುದ್ದಿ

ಕೊರೊನಾ ಪಾಸಿಟಿವ್ ಹೊಂದಿದ ಸಿಂಗರ್ ಕನಿಕಾ‌ ಕಪೂರ್ ವಿರುದ್ಧ ಎಫ್ಐಆರ್ ಯಾಕೆ ಗೊತ್ತಾ.?

ಲಖನೌಃ ಬಾಲಿವುಡ್ ಸಿಂಗರ್ ಕನಿಕಾ ಕಪೂರ್ ಲಂಡನ್ ನಿಂದ ದೇಶಕ್ಕೆ ಮರಳಿ ಹಲವಡೆ ಕಾರ್ಯಕ್ರಮಗಳನ್ನು ಕೊಟ್ಟಿದ್ದು ಕೊರೊನಾ ತಪಾಸಣೆಗೆ ಒಳಪಡದೆ ನಿರ್ಲಕ್ಷ ವಹಿಸಿರುವ‌ಕಾರಣ ನಟಿ ಕನಿಕಾ ಮೇಲೆ ಪ್ರಕರಣ ದಾಖಲಾಗಿದೆ.

ಮುಂಬೈಗೆ ಆಗಮಿಸಿದ್ದ ಸಿಂಗರ್ ಕನಿಕಾ ಮೊದಲು ಕೊರೊನಾ ಹಿನ್ನೆಲೆ ದೇಶದಲ್ಲಿ ಕೈಗೊಂಡ‌ ನಿಯಮಗಳನ್ನು ಪಾಲನೆ‌ ಮಾಡಬೇಕಿತ್ತು.‌ಅದನ್ನು ನಿರ್ಲಕ್ಷಿಸಿರುವ ಕಾರಣ ಲಖೌನ್‌ ದ ಮೆಡಿಕಲ್ ಆಫೀಸರ್ ಒಬ್ಬರು ನೀಡಿದ ದೂರಿನನ್ವಯ ಕನಿಕಾ‌ ವಿರುದ್ಧ ಕೇಸ್ ದಾಖಲಾಗಿದೆ.

ಡೆಡ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ರಕ್ಷಿಸಲು ಅಗತ್ಯವಾದ ನಿರ್ದೇಶನಗಳನ್ನು ಕನಿಕಾ ಪಾಲಿಸಿಲ್ಲ. ಉತ್ತರ‌ ಪ್ರದೇಶ ಏರ್ಪೋರ್ಟ್ ನಲ್ಲಿ ತಪಾಸಣೆಗೆ ಕನಿಕಾ‌ ಸ್ಪಂಧಿಸಿಲ್ಲ ಎನ್ನಲಾಗಿದೆ. ಸೋಂಕು ಕುರಿತು ತೀವ್ರ‌ ನಿರ್ಲಕ್ಷ ವಹಿಸಿರುವ ಕಾರಣ‌ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಹೊರದೇಶದಿಂದ ಬಂದ ನಂತರ 14 ದಿವಸ ದಿಗ್ಭಂಧನದಲ್ಲಿರಬೇಕಿದ್ದ ಕನಿಕಾ‌ ಹಲವಾರು ಕಾರ್ಯಕ್ರಮ ಗಳನ್ನು ಕೊಟ್ಟಿದ್ದಾರೆ ಅಲ್ಲದೆ ಪಾರ್ಟಿ ಏರ್ಪಡಿಸಿ ರಾಜಕಾರಣಿಗಳು‌ ಸೇರಿದಂತೆ ಇತರರನ್ನು ಆಹ್ವಾನಿಸಿದ್ದರು. ಹೀಗಾಗಿ ಸೋಂಕು ಹರಡಲು ಕಾರಣರಾಗಿರುವ ಸದ್ಯ ಕೊರೊನಾ ಪಾಸಿಟಿವ್ ಹೊಂದಿರುವ ಕೊರೊನಾ ವಿರುದ್ಧ ಎಫ್ ಐ ಆರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button