ಪ್ರಮುಖ ಸುದ್ದಿ
ರಾಜ್ಯದಲ್ಲಿ ಐದು ದಿನ ಮಳೆ ಸಂಭವಃ ಹವಾಮಾನ ಮುನ್ಸೂಚನೆ
ರಾಜ್ಯದಲ್ಲಿ ಐದು ದಿನ ಮಳೆ ಸಂಭವಃ ಹವಾಮಾನ ಮುನ್ಸೂಚನೆ
ವಿವಿ ಡೆಸ್ಕ್ಃ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದ ಹಲವಡೆ ಅಕಾಲಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಾರ್ಚ್ 26 ರಿಂದ ಮಾರ್ಚ್ 30 ರವರೆಗೆ ಈ ಐದು ದಿನ ಹಲವು ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ಮಡ ದಕ್ಷಿಣ ಒಳನಾಡಿನ ಚಿಕ್ಕಮಗಳೂರ, ಹಾಸನ, ಬೆಳಗಾವಿ, ಕೊಡಗು ಮೈಸೂರು, ರಾಮನಗರದಲ್ಲಿ ಮಳೆಯಾಗುವ ಲಕ್ಷಣಗಳು ಕಂಡು ಬಂದಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಹಲವಡೆ ಸಾಧಾರಣ ಮಳೆಯಾದರೂ ಅಚ್ಚರಿ ಪಡುವ ಅಗತ್ಯವಿಲ್ಲ ಎಂದು ಇಲಾಖೆಯ ತಜ್ಞರು ತಿಳಿಸಿದ್ದಾರೆ.