ಪ್ರಮುಖ ಸುದ್ದಿ
ನ.11′ 12 ರಂದು ರಾಜ್ಯದಲ್ಲಿ ಹಲವಡೆ ಭಾರಿ ಮಳೆ, ಯಲ್ಲೋ ಅಲರ್ಟ್

ನ.11′ 12 ರಂದು ರಾಜ್ಯದಲ್ಲಿ ಹಲವಡೆ ಭಾರಿ ಮಳೆ, ಯಲ್ಲೋ ಅಲರ್ಟ್
ಬೆಂಗಳೂರಃ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವಡೆ ಎರಡು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜ ನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರ, ತುಮಕೂರ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರ ಸೇರಿದಂತೆ ಹಾಸನದಲ್ಲಿ ಇದೇ ನವೆಂಬರ್ 11 ಮತ್ತು 12 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಅಲ್ಲದೆ ರಾಜ್ಯದ ಹಲವಡೆ ಇಂದು & ನಾಳೆ ಗುಡುಗು ಸಿಡಿಲಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.