ಸಚಿವ ಸ್ಥಾನ ಸಿಗಲು ಅದೃಷ್ಟ ಕೊರತೆ ಇದೆ – ರಾಜೂಗೌಡ
ಸಚಿವ ಸ್ಥಾನ ಸಿಗಲು ಅದೃಷ್ಟ ಕೊರತೆ ಇದೆ – ರಾಜೂಗೌಡ
ಯಾದಗಿರಿಃ ಸಚಿವ ಸ್ಥಾನ ದೊರೆಯಲು ಅದೃಷ್ಟದ ಕೊರತೆ ಇದೆ ಎಂದು ಸುರಪುರ ಶಾಸಕ ರಾಜೂಗೌಡ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನೂತನ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ, ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಮುಂದುವರೆದು ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಬೇಕೆಂದು ಎಷ್ಟೇ ಪ್ರೀತಿ ಆಸೆ ಇದ್ರೂ ಕೆಲವೊಂದು ಸಮಯ ಕೂಡಿ ಬರುವದಿಲ್ಲ.
ಹೀಗಾಗಿ ನನಗೆ ಸಚಿವ ಸ್ಥಾನ ಕೈ ತಪ್ಪಿರಬಹುದು. ರಾಜಭವನದೊಳಗೆ ಹೋಗುವವರೆಗೂ ನನ್ನ ಹೆಸರಿದ್ದು, ಒಳಗಡೆ ಹೋದ ಮೇಲೆ ನನ್ನ ಹೆಸರು ಬದಲಾವಣೆ ಆಗ್ತದೆ ಎಂಬುದು ಗೊತ್ತಿತ್ತು. ಯಾವ ಕಾರಣಕ್ಕೆ ನನಗೆ ಸಚಿವ ಸ್ಥಾನ ನೀಡಲಿಲ್ಲ ಎಂಬುದು ನನ್ನ ಮನಸ್ಸಿಗೆ ಖಾತರಿ ಇದೆ.
ಅದನ್ನು ಬಹಿರಂಗ ಪಡಿಸಲಾಗಲ್ಲ. ನಾನಿನ್ನೇನು 42 ವರ್ಷ ಮುಂದೆ ಪಾರ್ಟಿ ಕಟ್ಟಿ ಇನ್ನು ಹೆಚ್ಚಿನ ಅಭಿವೃದ್ಧಿ, ಉತ್ತಮ ಕೆಲಸ ಮಾಡುವ ಮೂಲಕ ರಾಜೂಗೌಡಗೆ ಸಚಿವ ಸ್ಥಾನ ನೀಡಲೇ ಬೇಕು ಎಂಬಷ್ಟರ ಮಟ್ಟಿಗೆ ಕೆಸಲ ಮಾಡುವೆ.
ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಸಚಿವ ಸ್ಥಾನ ಅದರಲ್ಲೂ ಉತ್ತಮ ಖಾತೆ ದೊರೆಯಬಹುದು ಎಂದು ಸಮಾಧಾನದಿಂದಲೇ ಉತ್ತರಿಸಿದರು. ಇನ್ನೂ ಯಾದಗಿರಿ, ಕಲ್ಬುರ್ಗಿ ಮತ್ತು ರಾಯಚೂರ ಭಾಗಕ್ಕೆ ಯಾರಿಗಾದರೂ ಸರಿ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡುವೆ ಎಂದರು.