ಶಹಾಪುರಃ ಜೆಸ್ಕಾಂನಲ್ಲಿ ರಾಜ್ಯೋತ್ಸವ ಸಂಭ್ರಮ

ಕನ್ನಡ, ಪ್ರೀತಿಸಿ, ಪೂಜಿಸಿ ಆರಾಧಿಸಿ-ಲೋಹಾರಿ
yadgiri, ಶಹಾಪುರಃ ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಜೆಸ್ಕಾಂ ಕಚೇರಿಯಲ್ಲಿ ಸಿಬ್ಬಂದಿಗಳಿಂದ ರಾಷ್ಟ್ರಧ್ವಜಾರೊಹಣ ನೆರವೇರಿಸಲಾಯಿತು. ರಾಜ್ಯೋತ್ಸವ ನಿಮಿತ್ತ ಧ್ವಜಸ್ತಂಭ ಸಿಂಗರಿಸಲಾಗಿತ್ತು. ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ತಾಜುದ್ದಿನ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಸ್ಕಾಂ ಪ್ರಭಾರಿ ಶಾಖಾಧಿಕಾರಿ ಎಕ್ಬಾಲ್ ಲೋಹಾರಿ, ಕನ್ನಡ ವಿಶ್ವಮಟ್ಟದಲ್ಲಿ ಬೆಳೆದು ಬಂದಿದೆ. ಎಲ್ಲೆಡೆ ಕನ್ನಡ ಪಸರಿಸಿದ್ದು, ವಿದೇಶಿಗರು ಕನ್ನಡ ಭಾಷೆಯಲ್ಲಿ ಹಲವಾರು ಶಬ್ಧಕೋಶ ಇತರೆ ಪುಸ್ತಗಳನ್ನು ರಚಿಸಿದ್ದಾರೆ.
ಅದ್ಭುತ ಭಾಷೆ ನಮ್ಮದಾಗಿದ್ದು, ಕನ್ನಡ ಭಾಷೆ ಉಳಿವಿಗೆ ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕು ಕನ್ನಡದಲ್ಲಿಯೇ ವ್ಯವಹರಿಸಬೇಕು. ಜೆಸ್ಕಾಂನ ವಿದ್ಯುತ್ ಬಿಲ್‍ಗಳು ಈಗಾಗಲೇ ಕನ್ನಡದಲ್ಲಿಯೇ ನೀಡಲಾಗುತ್ತಿದೆ. ಉಳಿದಂತೆ ಜೆಸ್ಕಾಂ ಕನ್ನಡವನ್ನೆ ಜಾಸ್ತಿ ಬಳಸುತ್ತಿದೆ. ಕನ್ನಡವನ್ನು ಪ್ರೀತಿಸಿ, ಆರಾಧಿಸಿ ಬೆಳೆಸಿರಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಾನೇಗೌಡ, ವಿಜಯ ಕೆ.ಪಾಟೀಲ್, ಮಾಳಪ್ಪ, ಸಂಗಣ್ಣ, ಬೆನಕಪ್ಪ ಇತರರಿದ್ದರು.
——————