ಪ್ರಮುಖ ಸುದ್ದಿ
ಶಹಾಪುರಃ ತಂಗಿಯ ಮೇಲೆ ಅಣ್ಣನ ಅತ್ಯಾಚಾರ, ಆರೋಪಿ ಬಂಧನ

ತಂಗಿಯ ಮೇಲೆ ಅಣ್ಣನ ಅತ್ಯಾಚಾರ
ಯಾದಗಿರಿಃ ಅನಾರೋಗ್ಯ ಹಿನ್ನೆಲೆ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಿಂದ ಶಹಾಪುರ ನಗರ ಆಸ್ಪತ್ರೆಗೆ ತಯಾರಾಗಿದ್ದ ಅಣ್ಣನ ಜೊತೆ ತಂಗಿ (ದೊಡ್ಡಪ್ಪನ ಮಗಳು) ತಾನೂ ಬರುವದಾಗಿ ಕೇಳಿಕೊಂಡ ಕಾರಣ ಆಕೆಯನ್ನು ದ್ವಿಚಕ್ರವಾಹನ ಮೇಲೆ ಕರೆದುಕೊಂಡು ಬರುವಾಗ, ಶಹಾಪುರ ತಾಲೂಕಿನ ಶೆಟ್ಟಿಗೇರಾ ಮಾರ್ಗ ಮಧ್ಯೆ ಕೆನಾಲ್ ಹತ್ತಿರ ತಂಗಿ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಗ್ರಾಮೀಣ ಸಿಪಿಐ ಶ್ರೀನಿವಾಸ ಅಲ್ಲಾಪುರೆ ಮಾಹಿತಿ ನೀಡಿದ್ದು, ದೇವರಗೋನಾಲದ ಹಣಮಂತ ಶಹಾಪುರಕರ್ (35) ಎಂಬಾತನೇ ಆರೋಪಿಯಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.