ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ರುಕ್ಮಣಿ ರಿಯಾರ್
ಚಂಡೀಗಢ: ಸಾಮಾನ್ಯವಾಗಿ ಯುಪಿಎಸ್ ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಉತ್ತೀರ್ಣರಾಗುವುದೇ ಕಷ್ಟಸಾಧ್ಯ. ಹೀಗಿರುವಾಗ ಯಾವುದೇ ತರಬೇತಿ ಇಲ್ಲದೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಉತ್ತಮ ರ್ಯಾಂಕ್ ಪಡೆಯುವುದು ಸುಲಭದ ಮಾತಲ್ಲ. ಹೀಗೆ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎರಡನೇ ರ್ಯಾಂಕ್ ಪಡೆದ ರುಕ್ಮಣಿ ರಿಯಾರ್ ಅವರ ಯಶೋಗಾಥೆ ಇದು.
ರುಕ್ಮಣಿ ರಿಯಾರ್ ಅವರು ಮೂಲತಃ ಚಂಡೀಗಢದವರು. ರುಕ್ಮಿಣಿ ಅವರು ಪ್ರಾಥಮಿಕ ಶಿಕ್ಷಣ ಪಡೆಯುವಾಗ ಅಷ್ಟೇನು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರಲಿಲ್ಲ. ಅವರು 6ನೇ ತರಗತಿಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ. ಗುರುದಾಸ್‌ಪುರದಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಅವರು ಡಾಲ್‌ಹೌಸಿಯ ಸೇಕ್ರೆಡ್ ಹೀರಿ ಶಾಲೆಗೆ ಸೇರುತ್ತಾರೆ.
ರುಕ್ಮಣಿ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡ ಅವರು ಸಮಾಜ ವಿಜ್ಞಾನ ವಿಷಯದಲ್ಲಿ ಪದವಿ ಪಡೆಯುತ್ತಾರೆ. ಬಳಿಕ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ನಿಂದ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸುತ್ತಾರೆ. ರುಕ್ಮಣಿ ತನ್ನ ಸ್ನಾತಕೋತ್ತರ ಪದವಿಯ ನಂತರ ಮೈಸೂರಿನ ಆಶೋದಾ ಮತ್ತು ಮುಂಬೈನ ಅನ್ನಪೂರ್ಣ ಮಹಿಳಾ ಮಂಡಲದಂತಹ ಎನ್‌ಜಿಒಗಳಲ್ಲಿ ಇಂಟರ್ನ್ ಆಗಿ ಸೇವೆ ಸಲ್ಲಿಸುತ್ತಾರೆ.
ರುಕ್ಮಿಣಿ ಅವರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುವ ಕನಸನ್ನು ಹೊಂದಿದ್ದರು. ಹೀಗಾಗಿ ಯುಪಿಎಸ್ ಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಾರೆ. 2011 ರಲ್ಲಿ, ಯುಪಿಎಸ್ ಸಿ ಪರೀಕ್ಷೆ ಬರೆದ ಅವರು 2ನೇ ರ್ಯಾಂಕ್ ಪಡೆದು ತನ್ನ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಈ ಮೂಲಕ ತನ್ನ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡ ಅವರು ಹಲವಾರು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.