ಪ್ರಮುಖ ಸುದ್ದಿ
ಸೂಫಿ ಸರಮಸ್ತ್ ಸಾಬ ಗಂಧ, ದೀಪ ಸಂಪನ್ನ ನಾಳೆ ಜಿಯಾರತ್
ಸೂಫಿ ಸರಮಸ್ತ್ ಸಾಬ ಗಂಧ, ದೀಪ ಸಂಪನ್ನ ನಾಳೆ ಜಿಯಾರತ್
yadgiri, ಶಹಾಪುರಃ ತಾಲೂಕಿನ ಸಗರ ಗ್ರಾಮದ ಸೂಫಿ ಸರಮಸ್ತ್ಸಾನ ದರ್ಗಾದ ಉರುಸ್ ಅಂಗವಾಗಿ ಗುರುವಾರ ಸಾವಿರಾರು ಜನ ಭಕ್ತರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸೂಫಿ ಸಂತ ಸರಮಸ್ತ್ಸಾಬರ ದರ್ಶನ ಪಡೆದರು.
ಜಾತ್ರೆ ಅಂಗವಾಗಿ ಮಕ್ಕಳ ಆಟಿಕೆಗೆ ಜೀಕಾ, ಕುದುರೆ ಜೀಕಾ ಸೇರಿದಂತೆ ಇತರೆ ಆಟಿಕೆಗಳು ಕಂಡು ಬಂದವು. ಉರುಸ್ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನಸಂಖ್ಯೆ ಸೇರಿತ್ತು. ಕಳೆದ ಬಾರಿ ಕೋವಿಡ್ ಕಾರಣದಿಂದಾಗಿ ಉರುಸ್ ಅತ್ಯಂತ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿಯು ಸರಳವಾಗಿ ಆಚರಿಸಿದರೂ, ಒಂದಿಷ್ಟು ಕೊರೊನಾ ಕಡಿಮೆ ಇರುವ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಳವಿತ್ತು.
ಸಾಲಾಗಿ ಬಂದು ದರ್ಗಾದ ಸಾಹೇಬ ದರ್ಶನ ಪಡೆಯುತ್ತಿರುವದು ಕಂಡು ಬಂದಿತ್ತು. ಅಲ್ಲದೆ ಹರಿಕೆಗಳು ಸಹ ಇದೇ ಸಂದರ್ಭದಲ್ಲಿ ಜರುಗಿದವು. ಈ ಸಂದರ್ಭದಲ್ಲಿ ದರ್ಗಾದ ಸಯ್ಯದ್ ಶಹಾ ಮುಜೀಬುದ್ದೀನ್ ಸರಮಸ್ತ್ ಉಪಸ್ಥಿತರಿದ್ದು, ಉರುಸ್ ಅಂಗವಾಗಿ ದರ್ಗಾಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದರು.