ಸಂತೋಷ ಸಾವಿನ ಆರೋಪಃ ಈಶ್ವರಪ್ಪ ಸೇಫ್
ಸಂತೋಷ ಸಾವುಃ ಬಿ.ರಿಪೋರ್ಟ್ ಸಲ್ಲಿಕೆ ಈಶ್ವರಪ್ಪ ಕ್ಲೀನ್ ಚಿಟ್
ವಿವಿ ಡೆಸ್ಕ್ಃ ಈಚೆಗೆ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಅಷ್ಟೆ ಅಲ್ಲ ರಾಷ್ಟ್ರಮಟ್ಟದಲ್ಲೂ ಫೋಕಸ್ ಆಗಿತ್ತು.
ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಉಡುಪಿ ಎಸ್ಪಿ ಅವರು ನಿರಾಧಾರ ಆರೋಪ ಕುರಿತು ಪ್ರಕರಣದ ಬಗ್ಗೆ ಬಿ.ರಿಪೋರ್ಟ್ ಸಲ್ಲಿಸಿರುವದರಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೇಸ್ ನಿಂದ ಮುಕ್ತವಾಗಿದ್ದಾರೆ.
ಈ ಪ್ರಕರಣ ಕುರಿತು ಪೊಲೀಸ್ ತನುಖಾ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ.ರಿಪೋರ್ಟ್ ಸಲ್ಲಿಸಿದ್ದು, ಈಶ್ವರಪ್ಪನವರಿಗೆ ಬಿಗ್ ರಿಲೀಫ್ ದೊರೆತಿದೆ.
ಆದರೆ ಮೃತ ಸಂತೋಷ ಅವರ ಕುಟುಂಬಸ್ಥರು ಬು.ರಿಪೋರ್ಟ್ ಕುರಿತು ನ್ಯಾಯಾಲಯದಲ್ಲಿ ಚಾಲೆಂಜ್ ಮಾಡುತ್ತೇವೆ. ಕಾರಣ ತನಿಖಾ ಅಧಿಕಾರಿಗಳಾಗಲಿ, ಉಡುಪಿ ಜಿಲ್ಲಾ ಎಸ್ಪಿ ಅವರು ನಮ್ಮ ಕರೆ ಸಹ ಸ್ವೀಕರಿಸಿರುವದಿಲ್ಲ.
ಅಲ್ಲದೆ ಈ ಬಿ.ರಿಪೋರ್ಟ್ ಕುರಿತು ಯಾವುದೇ ನೊಟೀಸ್ ನಮಗೆ ಬಂದಿರುವದಿಲ್ಲ. 10 ದಿವಸದಲ್ಲಿ ಮೂರು ನೋಟಿಸ್ ನೀಡುವ ಮೂಲಕ ಈಶ್ವರಪ್ಪನವರ ರಕ್ಷಣೆಗೆ ಸರ್ಕಾರ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.