
10 ಕ್ಕೂ ಹೆಚ್ಚು ಅಂಗಡಿ ಶೆಟರ್ ಮುರಿದು ಕಳ್ಳತನ
ಸರಣಿ ಕಳ್ಳತನ ಪ್ರಕರಣ : ಕಣ್ಮುಚ್ಚಿ ಕುಳಿತ ಪೊಲೀಸರು ಆರೋಪ
yadgiri, ಶಹಾಪುರಃ ನಗರದ ಹೃದಯ ಭಾಗವಾದ ರಾಜ್ಯ ಹೆದ್ದಾರಿಯಲ್ಲಿರುವ ಜನನಿಬಿಡ ಮಾರ್ಗವಾದ ಗ್ಯಾರೇಜ್ ಲೈನ್‍ನಲ್ಲಿರುವ 10 ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಕಳ್ಳತನ ನಡೆಸಿದ ಘಟನೆ ಗುರುವಾರ ತಡರಾತ್ರಿಯಲ್ಲಿ ನಡೆದಿದೆ.
ಸುಮಾರು 10 ಅಂಗಡಿಗಳ ಶೆಟರ್ ಮುರಿದ ಕಳ್ಳರು ಸೂಪರ್ ಕಾರ್ ಮ್ಯೂಸಿಕ್ ವಲ್ರ್ಡ್ ಮತ್ತು ಸರ್ವಿಸ್ ಸೆಂಟರ್ ನಲ್ಲಿದ್ದ 45 ಸಾವಿರ, ಐಸ್ ಕ್ರೀಮ್ ಅಂಗಡಿಯಲ್ಲಿದ್ದ 5 ಸಾವಿರ ರೂ. ದೋಚಿದ್ದು, ಇನ್ನುಳಿದ ಅಂಗಡಿಗಳ ಸಮರ್ಪಕ ಮಾಹಿತಿ ದೊರೆತಿರುವದಿಲ್ಲ.
ಕೆಲ ಅಂಗಡಿಗಳ ಶೆಟರ್ ಮುರಿದಿದ್ದರೂ ಅಂಗಡಿಯಲ್ಲಿ ದೋಚಿದ್ದ ಸಮರ್ಪಕ ಮಾಹಿತಿ ದೊರೆತಿರುವದಿಲ್ಲ. ಅಲ್ಲದೆ ಶ್ವಾನ ದಳ ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಣಿ ಕಳ್ಳತನ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪ ಆಕ್ರೋಶಃ ಕಳೆದ 8 ತಿಂಗಳಿಂದ ನಗರದಲ್ಲಿ ಸರಣಿ ಕಳ್ಳತನಗಳು ಜಾಸ್ತಿಯಾಗಿದ್ದು, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಟೆಂಗಿನಕಾಯಿ ಅಂಗಡಿಯಲ್ಲಿ ಐದು ಲಕ್ಷ ರೂ. ದೋಚಿದ್ದು, ಅಲ್ಲದೆ ಕಳೆದ ತಿಂಗಳವಷ್ಟೆ ಆಶೀರ್ವಾದ ಮೆಡಿಕಲ್, ಸಿಬಿ ಕಮಾನ್ ಹತ್ತಿರ ಮೆಡಿಕಲ್ ಸೇರಿದಂತೆ ಇತರಡೆ ಕಳ್ಳತನ ನಡೆದಿತ್ತು. ಹೀಗಾಗಿ ಜನರು ಪೊಲೀಸರ ನಡೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ರಾತ್ರಿ ಪೊಲೀಸರು ಗಸ್ತು ಸಂಚಾರ ನಡೆ ಕುರಿತು ಜನ ಪ್ರಶ್ನೆ ಮಾಡುತ್ತಿದ್ದಾರೆ.