ಶಹಾಪುರ: ಐತಿಹಾಸಿಕ ಕನ್ಯಾಕೋಳೂರ ಅಗಸಿ ರಕ್ಷಣೆಗೆ ಮುಂದಾದ ಕಾರ್ಮಿಕರು
ಜಾಂಬವ ನಗರ ಯುವಕರ ಕಾಳಜಿ
ಕನ್ಯಾಕೋಳೂರ ಅಗಸಿ ದುರಸ್ಥಿ ಕಾರ್ಯಕ್ಕೆ ಮುಂದಾದ ಯುವಕರು
ಮಲ್ಲಿಕಾರ್ಜುನ ಮುದ್ನೂರ
ಶಹಾಪುರ: ನಗರದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಐತಿಹಾಸಿಕ ಎರಡು ಅಗಸಿಗಳು ಇಲ್ಲಿವೆ. ಎರಡು ಅಗಸಿಗಳು ಅಳವಿನಂಚಿನಲ್ಲಿದ್ದು, ಅವುಗಳ ರಕ್ಷಣೆ ಅಗತ್ಯವೆನಿಸಿತ್ತು. ಆಗ ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಗರಸಭೆ ಸೇರಿದಂತೆ ಇತರೆ ಇಲಾಖೆಗಳ ಕಾಳಜಿಯಿಂದ ಸರ್ಕಾರ ಅನುದಾದಲ್ಲಿ ನಗರದ ಪಶ್ಚಿಮ ಭಾಗದ ದಿಗ್ಗಿ ಅಗಸಿಯನ್ನು ಕಳೆದ ಮೂರು ವರ್ಷಗಳ ಹಿಂದೆಯೇ ದುರಸ್ಥಿ ಗೊಳಿಸಲಾಯಿತು.
ಆದರೆ ನಗರದ ಪೂರ್ವ ಭಾಗದ ಕನ್ಯಾಕೋಳೂರ ಅಗಸಿ ದುರಸ್ಥಿ ಕಾರ್ಯಕೈಕೊಳ್ಳದೆ ನಿರ್ಲಕ್ಷವಹಿಸಲಾಗಿತ್ತು.
ಪ್ರಸ್ತುತ ಕನ್ಯಾಕೋಳೂರ ಅಗಸಿ ಹತ್ತಿರದ ಜಾಂಬವ ನಗರದಲ್ಲಿ ವಾಸಿಸುವ ಮನೆ ಕಟ್ಟುವ ಕೆಲಸ ಮಾಡುವ ಕಾರ್ಮಿಕರೆಲ್ಲರು (ಗೌಂಡಿಗಳು) ಸೇರಿ ಐತಿಹಾಸಿಕವಾದ ಕನ್ಯಾಕೋಳೂರ ಅಗಸಿಯ ದುರಸ್ಥಿ ಕಾರ್ಯಕ್ಕೆ ಸ್ವಯಂ ಪ್ರೇರಣೆಯಿಂದ ಮುಂದಾಗಿದ್ದು, ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಿತ್ಯ ಗೋಡೆ ಕಟ್ಟುವ ಕೆಲಸ ಮಾಡುವ ಈ ಯುವಕರ ಬಳಗ ಕಣ್ಮುಂದೆಯೇ ಬೀಳುತ್ತಿರುವ ಅಗಸಿಯನ್ನು ತಕ್ಕಮಟ್ಟಿಗೆ ದುರಸ್ಥಿ ಕೆಲಸ ಮಾಡಲು ನಿರ್ಧರಿಸಿ ನಿತ್ಯ ಒಂದಿಷ್ಟು ತಾಸು ಸೇವೆ ಸಲ್ಲಿಸುತ್ತಿದ್ದಾರೆ. ಬಿದ್ದಿರುವ ಅಗಸಿ ಕಲ್ಲುಗಳನ್ನೆ ಬಳಸಿಕೊಂಡು, ಸಿಮೆಂಟ್ ಹಾಕಿ ಜೋಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಬಡಾವಣೆಯ ಜನರು ಸಹಕರಿಸುತ್ತಿದ್ದಾರೆ.
ಗೋಡೆ ಕಟ್ಟುವ ಕಾರ್ಮಿಕರ ಸ್ವಯಂ ಕಾಳಿಜಿಯಿಂದ ಅಳಿವಿನಂಚಿನಲ್ಲಿರುವ ಅಗಸಿಗೆ ಕಾಯಕಲ್ಪ ದೊರೆಯುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದೆ, ಬರಗಾಲದ ಛಾಯೆಯಲ್ಲಿ ನರಳುತ್ತಿರುವ ಈ ಸಂದರ್ಭದಲ್ಲಿ ಶ್ರಮ ಜೀವಿಗಳಾದ ಇವರು ಸ್ವಯಂ ಪ್ರೇರಣೆಯಿಂದ ಅಗಸಿ ದುರಸ್ಥಿ ಕಾರ್ಯಕ್ಕೆ ಮುಂದಾಗಿರುವುದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಬಡಾವಣೆಯ ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರೋತ್ಸಾಹಿಸುವ ಮೂಲಕ ಕೈಲಾದ ಸಹಕಾರ ನೀಡುತ್ತಿದ್ದಾರೆ.
ಕಾರ್ಮಿಕರಾದ ಶಿವುಕುಮಾರ ದೊಡ್ಮನಿ, ಭೀಮರಾಯ ಕದರಾಪುರ, ಹುಲಗಪ್ಪ ಪೂಜಾರಿ, ಅಯ್ಯಪ್ಪ ಕದರಾಪುರ, ಸಿದ್ದುಕ ಕ್ಕಸಗೇರಿ, ಜಟ್ಟೆಪ್ಪ ಕದರಾಪುರ, ಅಂಬ್ಲಪ್ಪ ಯನಗುಂಟಿ, ಭೀಮರಾಯ ಯಕ್ಷಿಂತಿ, ಈಶ ಶಟಿಗೇರಾ ಇತರರು ಸ್ವಯಂ ಪ್ರೇರಣೆಯಿಂದ ಅಗಸಿ ದುರಸ್ಥಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
Good work.
Thank u..
Good work sir..Hats off
Thank u sir..