ಪ್ರಮುಖ ಸುದ್ದಿ

ಮಾಜಿ ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

ವಾರ್ಡ್ ಸಂಖ್ಯೆ 22 ರಲ್ಲಿ ಬಿಜೆಪಿ ಸೇರ್ಪಡೆ

ವಾರ್ಡ್ ಸಂಖ್ಯೆ 22 ರಲ್ಲಿ ಬಿಜೆಪಿ ಸೇರ್ಪಡೆ

ಮಾಜಿ ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

yadgiri, ಶಹಾಪುರಃ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತು ಮುಖ್ಯವಾಗಿ ಶಹಾಪುರ ಮತ ಕ್ಷೇತ್ರದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಹಿತ ಬಯಸಿ ಹಗಲು ರಾತ್ರಿ ಎನ್ನದೆ ದೇಶದ ಏಳ್ಗೆಗಾಗಿ ಶ್ರಮಿಸುತ್ತಿರುವ ಪ್ರಧಾನಿ ಮೋದಿಜೀಯವರನ್ನು ಬೆಂಬಲಿಸಿ ಇಲ್ಲಿನ ವಾರ್ಡ್ ಸಂಖ್ಯೆ 22 ರಲ್ಲಿ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯದವರು ವಿವಿಧ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿಗೆ ಬರ ಮಾಡಿಕೊಂಡ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ಬಿಜೆಪಿ ಭಾರತದ ಹಿತ ಬಯಸುತ್ತದೆ. ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಎಲ್ಲಾ ಸಮುದಾಯದ ಹಿತ ಬಯಸುತ್ತದೆ ಅಲ್ಲದೆ ಏಳ್ಗೆಗೆ ಬೇಕಾದ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಮುಂಚೂಣಿವಹಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಅಲೆಮಾರಿ ಮತ್ತು ಅರೆ ಅಲೆಮಾರಿ ಸೇರಿದಂತೆ ಕಾರ್ಮಿಕರು ಮತ್ತು ವಿಶೇಷವಾಗಿ ರೈತರ ಪರವಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಲಾಭ ಪಡೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು.

ಪ್ರತಿ ಮನೆಯಲ್ಲೂ ಬಿಜೆಪಿ ಸರ್ಕಾರ ಜಾರಿಗೊಳಿಸಿದ ನೂರಾರು ಯೋಜನೆಗಳಲ್ಲಿ ಒಂದಾದರೂ ಯೋಜನೆಯ ಲಾಭ ಪಡೆದವರು ಸಿಗುತ್ತಾರೆ. ಮೋದಿಜಿಯವರಂಥ ಪ್ರಧಾನಿ ಪಡೆದ ಭಾರತೀಯರೆಲ್ಲರೂ ಧನ್ಯರೆಂದರೆ ತಪ್ಪಿಲ್ಲ. ಹೀಗಾಗಿ ದೇಶವನ್ನು ಅಭಿವೃದ್ಧಿಪಥದಲ್ಲಿ ಸಾಗಿಸುತ್ತಿರುವ ಪ್ರಧಾನಿಯವರೊಂದಿಗೆ ನಾವೆಲ್ಲ ಕೈಜೋಡಿಸಿಬೇಕಿದೆ. ಇಡಿ ಜಗತ್ತಿನಲ್ಲಿಯೇ ಅತಿ ದೊಡ್ಡ ಪಕ್ಷ ಬಿಜೆಪಿ ಮತ್ತು ವಿಶ್ವ ನಾಯಕರಾಗಿ ಬೆಳೆದಿರುವದು ಮೋದೀಜಿ ಇದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಗಂಧದಮಠ, ದೇವು ಕೋನೇರ, ಶಿವರಾಜ ದೇಶಮುಖ, ಗುರು ಕಾಮಾ ಇತರರು ಇದ್ದರು. ಪಾಂಡು, ಬೆನಕಪ್ಪ, ಕೊಂಡಪ್ಪ, ಗೌಡಪ್ಪ, ಪರಶುರಾಮ, ವೆಂಕಟೇಶ, ಖಂಡಪ್ಪ, ಬಸವರಾಜ, ಹಣಮಂತ, ಚಂದ್ರಶೇಖರ ಸೇರಿದಂತೆ ಬಡಾವಣೆಯ ಇತರರು ಮಾಜಿ ಶಾಸಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Related Articles

Leave a Reply

Your email address will not be published. Required fields are marked *

Back to top button