ಶಹಾಪುರಃ ಫೆ.20 ರಂದು ಉಚಿತ ತಪಾಸಣೆ ಶಿಬಿರ
ಶಹಾಪುರಃ ಫೆ.20 ರಂದು ಉಚಿತ ತಪಾಸಣೆ ಶಿಬಿರ
ಯಾದಗಿರಿಃ ನಗರದ ಇಂಡಿಯನ್ ಗ್ಯಾಸ್ ಏಜೆನ್ಸಿ ಹಳೇ ಬಸ್ ನಿಲ್ದಾಣ ಸಮೀಪ ಆರಬೋಳ ಲೇಔಟ್ ನಲ್ಲಿ ಇರುವ ನವೋದಯ ಸೂಪರ್ ಸ್ಪೆಷಾಲಿಟಿ ಸೆಂಟರ್ ನಲ್ಲಿ ಫೆ.20 ಶನಿವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರದಲ್ಲಿ ಹೃದಯ ತಜ್ಞ ಡಾ.ಶಂಕರಗೌಡ ಬಿ.ಹೆಚ್. ಸಕ್ಕರೆ ಖಾಯಿಲೆ ತಜ್ಞ ಡಾ.ಸಂತೋಷಎನ್.ಹರಕುಡೆ ಮತ್ತು ಶ್ವಾಶಕೋಶ ತಜ್ಞ ಡಾ.ಶ್ರಿಕಾಂತ ದುರ್ಗೆ, ಎಲಬು ಮತ್ತು ಕೀಲು ತಜ್ಞರಾದ ಡಾ.ಶ್ರೀಧರ ಲಾಕೆ, ದಂತ ತಜ್ಞೆ ಡಾ.ಗುರುರಾಜ ಅರಿಕೇರಿ, ಜನರಲ್ ಮೆಡಿಸನ್ ಡಾ.ಅರುಣಹಾಮನಿ, ಶಸ್ತ್ರ ತಜ್ಞಡಾ.ದೀಪಕುಮಾರ ಮತ್ತು ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಧೋತ್ರೆ ಆಗಮಿಸಲಿದ್ದು, ಶಿಬಿರಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.
ಮಧುಮೇಹ, ಬಿಪಿ, ಹರಣಿ, ಪೈಲ್ಸ್ ಮತ್ತು ಅಸ್ತಮಾ, ಹಲ್ಲಿನ ಪರೀಕ್ಷೆ ನಡೆಸಲಿದ್ದಾರೆ. ಅಲ್ಲದೆ ಹಲ್ಲಿನ ಪರೀಕ್ಷೆ ಜೊತೆ ಸಾಮಾನ್ಯ ಪರೀಕ್ಷೆ ಸಹ ನಡೆಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ನಾಗರಿಕರು ಶಿಬಿರದ ಲಾಭ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.