ಸಚಿವೆ ಎದುರು ವಿಷ ಕುಡಿದು ಸಾಯಬೇಕಿತ್ರಿ ನಾವು ಎಂದ ರೈತ ಮಹಿಳೆ
ಸಚಿವೆ ಎದುರು ವಿಷ ಕುಡಿದು ಸಾಯಬೇಕಿತ್ರಿ ನಾವು ಎಂದ ರೈತ ಮಹಿಳೆ
ವಿಜಯಪುರಃ ಕೃಷ್ಣಾ ನದಿ ಪ್ರವಾಹ ಬಂದಾಗಲೇ ನದಿ ತೀರ ವಾಸಿಸುವ ನಾವುಗಳು ಆವಾಗ್ಲೆ ಸಾಯಬೇಕಿತ್ರಿ ಇಲ್ಲಾ ಹೊಳೆ ನೀರಲ್ಲೆ ಹರಿದುಕೊಂಡು ಹೋಗಬೇಕಿತ್ತು.
ನಮ್ಮ ಶಾಸಕರಾದ ಎ.ಎಸ್.ಪಾಟೀಲ್ ನಡಹಳ್ಳಿ ಅವರು ನಮ್ಮ ಬೆನ್ನ ಹಿಂದೆ ಅದಾರ ಅಂಥ ಬದುಕಿವಿರ್ರಿ ಎಂದು ಪ್ರವಾಹ ಪೀಡಿತ ಪ್ರದೇಶವಾದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರ ಗ್ರಾಮಕ್ಕೆ ಭೇಟಿ ನೀಡಿದ ಸಚಿವೆ ಶಶಿಜಲಾ ಜೊಲ್ಲೆ ಎದುರು ರೈತ ಮಹಿಳೆ ನರಸಮ್ಮ ಗುಬಚಿ ಎಂಬ ಮಹಿಳೆ ಭಾವುಕಳಾಗಿ ತಮ್ಮ ಅಳಲನ್ನು ತೋಡಿಕೊಂಡರು.
ತಕ್ಷಣ ಸಮಧಾನಿಸಿದ ಸಚಿವೆ ಜೊಲ್ಲೆ, ನಿಮ್ಮ ಶಾಸಕರು ನಿಮ್ಮೆಲ್ಲ ಸಮಸ್ಯೆಗಳನ್ನು ಮನದಟ್ಟು ಮಾಡಿದ್ದಾರೆ. ಈ ಕುರಿತು ನಾನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೂಡಲೇ ಸಮಸ್ಯೆ ನಿವಾರಣೆಗೆ ಪರಿಹಾರ ಕಲ್ಪಿಸಲಾಗುವದು ಎಂದು ಭರವಸೆ ನೀಡಿದರು.
ಇದೇ ವೇಳೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಮತ್ತೊಮ್ಮೆ ರೈತರು, ಗ್ರಾಮಸ್ಥರ ಎದುರು ಸಮಸ್ಯೆ ಕುರಿತು ಸಚಿವೆ ಜೊಲ್ಲೆ ಗಮನ ಸೆಳೆದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ ಹುನಗುಂದಾ ಬಲದಿನ್ನಿ ಸೇರಿದಂತೆ ಜಿಲ್ಲಾ, ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.