ಯಾದಗಿರಿಃ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನ
ಯಾದಗಿರಿಃ ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ ಯಾದಗಿರಿ ನಗರದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಶಾಂತವೀರ ಮಲ್ಲಿಕಾರ್ಜುನ ಶಿವಾಚಾರ್ಯರು ಹೆಡಗಿಮದ್ರಾ, ಹಾಗೂ ಶ್ರೀನಿವಾಸ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಿ ಮಠ ಶ್ರೀಗಳ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಂತವೀರ ಶಿವಾಚಾರ್ಯರು, ಪ್ರತಿಯೊಬ್ಬರು ತಮ್ಮ ಭಕ್ತಿ ಇಷ್ಟದಂತೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕು. ಯಾರು ಎಷ್ಟು ದೇಣಿಗೆ ನೀಡಿದರೂ ಎನ್ನುವದು ಇಲ್ಲಿ ಮುಖ್ಯವಲ್ಲ. ಸರ್ವರೂ ಕೈಜೋಡಿಸಬೇಕಿದೆ. ದೇಶದ ಜನರು ಸಾಮೂಹಿಕವಾಗಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಶಕ್ತಿಗನುಸಾರವಾಗಿ ಭಕ್ತಿಪೂರ್ವಕವಾಗಿ ದೇಣೀಗೆ ನೀಡುವ ಮೂಲಕ ಶ್ರೀರಾಮನ ಸೇವೆ ಸಮರ್ಪಣೆ ಭಾವ ಅರ್ಪಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷ ಶಂಕ್ರಪ್ಪಗೌಡ ಬೆಳಗುಂದಿ, ಅಭಿಯಾನದ ಜಿಲ್ಲಾ ಸಂಚಾಲಕರಾದ ಮೂರ್ತಿ, ಸಹಸಂಚಾಲಕರಾದ ರಾಜೇಂದ್ರ, ನಗರ ಸಂಚಾಲಕರಾದ ಸೂಗಪ್ಪ ಮಂದುಲ್, ಸಹಸಂಚಾಲಕರಾದ ಅಂಬಯ್ಯ ಶಾಬಾದಿ, ಪ್ರಭು ಮತಗಿ, ಜಿಲ್ಲಾ ಜಮಾ ಕರ್ತರಾದ ಮಲ್ಲು ಚಾಪಲ್, ವೆಂಕಟರೆಡ್ಡಿ ಅಬ್ಬೆತುಮಕೂರು, ರಮೇಶ್ ದೊಡ್ಡಮನಿ, ಕೃμÁ್ಣರೆಡ್ಡಿ ಬಬಲಾದಿ, ಸಿದ್ದಲಿಂಗ ರೆಡ್ಡಿ ಅಡಿಕಿ, ಸೇರಿದಂತೆ ಸ್ವಯಂಸೇವಕರು ಕಾರ್ಯಕರ್ತರು ಉಪಸ್ಥಿತರಿದ್ದರು.