ಜಗದ್ಗುರುಗಳ ಜನ್ಮ ಸುವರ್ಣ ಮಹೋತ್ಸವಃ ಬೃಹತ್ ಕಾರ್ಯಕ್ರಮ
ಶ್ರೀಗಳು ವಹಿಸಿದ ಸೇವೆಗೆ ಸಿದ್ದ - ಶಾಸಕ ದರ್ಶನಾಪುರ
ಶ್ರೀಶೈಲ್‍ಃ ದ್ವಾದಶ ಪೀಠಾರೋಹಣ, ಜನ್ಮ ಸುವರ್ಣ ಮಹೋತ್ಸವ
ಶ್ರೀಗಳು ವಹಿಸಿದ ಸೇವೆಗೆ ಸಿದ್ದ – ಶಾಸಕ ದರ್ಶನಾಪುರ
YADGIRI, ಶಹಾಪುರ: ಶ್ರೀಶೈಲ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸರ್ವ ಭಕ್ತಾಧಿಗಳ ಆಶಯದೊಂದಿಗೆ ಆಯೋಜಿಸಲಾಗಿದ್ದು, ತನ್ನನಿಮಿತ್ತ ಧರ್ಮ ಜಾಗೃತಿಗಾಗಿ ಪಾದಯಾತ್ರೆ, ಇಷ್ಟಾರ್ಥ ಸಿದ್ಧಿಗಾಗಿ ಇಷ್ಟಲಿಂಗ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮುಂದಿನ ಪೀಳಿಗೆಗೆ ಪೀಠದಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಭಕ್ತಾಧಿಗಳ ಸದಿಚ್ಛೆಯ ಮೇರೆಗೆ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸರ್ವರೂ ತನುಮನಧನದಿಂದ ಸಹಕರಿಸಬೇಕೆಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಶ್ರೀಶೈಲ ಪೀಠದ ದ್ವಾದಶ ಪೀಠಾರೋಹಣ ಮತ್ತು ತಮ್ಮ ಜನ್ಮ ಸುವರ್ಣ ಮಹೋತ್ಸವ ನಿಮಿತ್ತ ಭಕ್ತಾಧಿಗಳು ನಗರದ ಶ್ರೀಚರಬಸವೇಶ್ವರ ಗದ್ದುಗೆಯಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೀಠಾರೋಣ ಮತ್ತು ಜನ್ಮ ಸುವರ್ಣ ಮಹೋತ್ಸವ ಸೇವೆಯಿಂದ ಸಂಗ್ರಹಗೊಂಡ ಸರ್ವವನ್ನು ಶ್ರೀಪೀಠದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ಭಕ್ತರಿಗೆ ಅನುಕೂಲ ಕಲ್ಪಿಸುವದಕ್ಕಾಗಿ ವ್ಯಯ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಶ್ರೀಗಳ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವದ ನಿಮಿತ್ತ ಶ್ರೀಶೈಲ ಪೀಠದಲ್ಲಿ ಭಕ್ತಾಧಿಗಳಿಗಾಗಿ ಅಭಿವೃದ್ಧಿ ಪಡಿಸಲು ಉಪಯೋಗಿಸುತ್ತಿರುವ ಹಲವಾರು ಕಾರ್ಯಕ್ರಮ ಹಾಗೂ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀಗಳು ವಹಿಸುವ ಯಾವುದೇ ಸೇವೆಯನ್ನು ಪಾಲಿಸಲು ಸಿದ್ಧನಾಗಿದ್ದೆನೆಂದು ಭರವಸೆ ನೀಡಿದರು. ಕಾರಣ ಸರ್ವ ಭಕ್ತಾಧಿಗಳು ತಮ್ಮ ತನುಮನಧನ ಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಸ್ಥಳೀಯ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶ್ರೀಗಳು, ಜಗದ್ಗುರುಗಳ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಅಕ್ಟೋಬರ್ 29 ರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರುದಿಂದ ಶ್ರೀಶೈಲದವರೆಗೆ ಜಗದ್ಗುರುಗಳೊಂದಿಗೆ ಅಸಂಖ್ಯಾತ ಭಕ್ತಾಧಿಗಳೊಂದಿಗೆ ಸುಮಾರು 565ಕಿ.ಮಿ ಪಾದಯಾತ್ರೆ, ಮಾರ್ಗಮಧ್ಯದಲ್ಲಿ ಬರುವ ಗ್ರಾಮಗಳಲ್ಲಿ ಧರ್ಮಜಾಗೃತಿ, ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆ ಹಾಗೂ ಮಾರ್ಗದ ಮಧ್ಯ ಎರಡೂ ಬದಿಗಳಲ್ಲಿ ಸುಮಾರು 2.50ಲಕ್ಷ ವೃಕ್ಷಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತದನಂತರ 2023 ಜನೇವರಿ 10 ರಿಂದ 14ನೇ ಜನೇವರಿವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆ ಮಹಾ ಅಧಿವೇಶನ, ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಮತ್ತು ತೆಲುಗು, ಕನ್ನಡ ಹಾಗೂ ಮರಾಠಿ ವೀರಶೈವ ಸಾಹಿತ್ಯಗೋಷ್ಠಿ, ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಭಕ್ತಾಧಿಗಳು ಧಾರ್ಮಿಕ ಸೇವಾ ಅಡಿಯಲ್ಲಿ ತುಲಾಭಾರ ಸೇವೆ, ಅನ್ನದಾನ ಸೇವೆ, ಇಷ್ಟಲಿಂಗ ಮಹಾಪೂಜಾ ಸೇವೆ, ರುದ್ರ ಹೋಮ ಸೇವೆ, ವಿಶೇಷ ದಾಸೋಹ ಸೇವೆ, ಶ್ರೀಪೀಠದಲ್ಲಿ ಯಾತ್ರಿ ನಿವಾಸದಲ್ಲಿ ಒಂದು ಕೋಣೆಯ ಕಟ್ಟಿಸುವ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಭಕ್ತಾಧಿಗಳು ಸೇವೆಯಲ್ಲಿ ಭಾಗವಹಿಸಬೇಕೆಂದು ಕರೆ ಕೊಟ್ಟರು.
ವೇದಿಕೆಯಲ್ಲಿ ಮಾಗಣಗೇರಿ ಡಾ.ವಿಶ್ವರಾಧ್ಯ ಶಿವಾಚಾರ್ಯರು, ಕನ್ಯೆಕೋಳೂರ ಚೆನ್ನವೀರ ಶಿವಾಚಾರ್ಯರು, ನಗರದ ಗುಮಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು, ಕೆಂಭಾವಿ ಚನ್ನಬಸವ ಶಿವಾಚಾರ್ಯರು, ಮದ್ರಕಿ ಶಿವಾಚಾರ್ಯರು, ಚಟ್ನಳ್ಳಿ ಶ್ರೀಗಳು, ಗದ್ದುಗೆಯ ಬಸವಯ್ಯ ಶರಣರು, ಶರಣು ಗದ್ದುಗೆ ಸೇರಿದಂತೆ ನೂರಾರು ಭಕ್ತಾಧಿಗಳು, ಮುಖಂಡರು, ಯುವಕರು ಭಾಗವಹಿಸಿದ್ದರು.