‘ಹಿಂದ’ ಹೋರಾಟ ಅಗತ್ಯವಿಲ್ಲ – ಸಿದ್ರಾಮಯ್ಯ
ಹಿಂದ ಹೋರಾಟ ಅಗತ್ಯವಿಲ್ಲ – ಸಿದ್ರಾಮಯ್ಯ
ಹುಬ್ಬಳ್ಳಿಃ ಯಾವುದೇ ಹಿಂದ ಹೋರಾಟ ಅಥವಾ ಸಮಾವೇಶ ನಡೆಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಹಿಂದುಳಿದವರ ಪರವಾಗಿದೆ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಹಲವಾರು ಸಮುದಾಯಗಳು ಹೋರಾಟವನ್ನು ತೀವ್ರಗೊಳಿಸಿವೆ. ಅದರಲ್ಲು ಕುರುಬ ಸಮುದಾಯ ಪಾದಯಾತ್ರೆ ನಡೆಸಿ ಬೃಹತ್ ಸಮಾವೇಶ ನಡೆಸುವ ಮೂಲಕ ಎಸ್.ಟಿ.ಮೀಸಲಾತಿ ಸೌಲಭ್ಯಕ್ಕೆ ಆಗ್ರಹ ಮಾಡಿತು.
ಹೀಗಾಗಿ ಕುರುಬ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದ ಸಿದ್ರಾಮಯ್ಯ ಮೀಸಲಾತಿ ಬೇಡಿಕೆ ಕುರಿತು ಲಕ್ಷಾಂತರ ಜನರು ಹೋರಾಟದಲ್ಲಿ ಭಾಗವಹಿಸಿದರೆ, ಸಿದ್ರಾಮಯ್ಯ ಅವರು ಮಾತ್ರ ಈ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದು, ಮೀಸಲಾತಿ ಹೋರಾಟದ ತೀವ್ರತೆಯಿಂದ ತಾವೂ ಹೋರಾಟದಲ್ಲಿ ಭಾಗವಹಿಸದೆ ಇದ್ರೆ ಕುರುಬ ಸಮುದಾಯದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.
ಭಾಗವಹಿಸಿದರೆ ಅಹಿಂದ ತತ್ವಕ್ಕೆ ಪೆಟ್ಟು ಬಿದ್ದು ಅಲ್ಪ ಸಂಖ್ಯಾತರು ಹಾಗೂ ದಲಿತ ಮತಗಳು ವಿಭಜನೆಯಾಗುತ್ತವೆ. ತನಗೆ ಆ ಸಮುದಾಯಗಳ ಮತಗಳು ಬರುವದಿಲ್ಲ ಎಂಬ ಆತಂಕವು ಅವರನ್ನು ಕಾಡುತ್ತಿದೆ ಎನ್ನಲಾಗಿದೆ.