ಪ್ರಮುಖ ಸುದ್ದಿ
ಓಲಂಪಿಕ್ಸ್ ನಲ್ಲಿ ಪಿವಿ ಸಿಂಧು ಸೆಮಿ ಫೈನಲ್
ಓಲಂಪಿಕ್ಸ್ ನಲ್ಲಿ ಪಿವಿ ಸಿಂಧು ಸೆಮಿ ಫೈನಲ್
ವಿವಿ ಡೆಸ್ಕ್ಃ ಟೋಕಿಯೋ ನಲ್ಲಿ ನಡೆಯುತ್ತಿರುವ ಓಲಂಪಿಕ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಭಾರತದ ಪಿವಿ ಸಿಂಧು ಸೆಮಿಫೈನಲ್ ತಲುಪಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ವಿಜಯಿಯಾದ ಸಿಂಧು ಗೆಲುವಿನ ನಾಗಲೋಟ ಮುಂದುವರೆಸಿದ್ದಾರೆ. ಜಪಾನಿನ ಅಕಾನೆ ಯಮಗೂಚಿ ಅವರನ್ನು ಸಿಂಧು ಕ್ವಾರ್ಟರ್ ಫೈನಲ್ ನಲ್ಲಿ ಸೋಲಿಸಿದ್ದಾರೆ.
ಓಲಂಪಿಕ್ಸ್ ನಲ್ಲಿ ಮತ್ತೊಂದು ಪದಕ ಪಡೆಯುವ ನಿರೀಕ್ಷೆಯನ್ನು ಭಾರತೀಯರಲ್ಲಿ ಸಿಂಧು ಮೂಡಿಸಿದ್ದಾರೆ. ಪಿವಿ ಸಿಂಧೂ ಅವರ ಗೆಲುವಿನ ಓಟ ಮುಂದುಬರೆದು ಸೆಮಿಫೈನಲ್ ಗೆದ್ದು ಫೈನಲ್ ನಲ್ಲೂ ಗೆಲುವು ಸಾಧಿಸುವ ಮೂಲಕ ಭಾರತದ ಧ್ವಜ ಓಲಂಪಿಕ್ಸ್ ನಲ್ಲಿ ಹಾರಿಸಲಿ ಎಂದು ವಿನಯವಾಣಿ ಹಾರೈಸುತ್ತದೆ.