ಶಹಾಪುರಃ ವಿದ್ಯಾಭ್ಯಾಸ ಹಾಳಾದರೆ ಬದುಕು ಬರಡಾದಂತೆ – ಗುರುಪಾದ ಶ್ರೀ
ಎಸ್.ಕೆ.ಪಬ್ಲಿಕ್ ಶಾಲೆಃ 18 ನೇ ವಾರ್ಷಿಕೋತ್ಸವ
ವಿದ್ಯಾಭ್ಯಾಸ ಹಾಳಾದರೆ ಬದುಕು ಬರಡಾದಂತೆ – ಗುರುಪಾದ ಶ್ರೀ
ಎಸ್.ಕೆ.ಪಬ್ಲಿಕ್ ಶಾಲೆಃ 18 ನೇ ವಾರ್ಷಿಕೋತ್ಸವ
yadgiri, ಶಹಪುರಃ ಅಡುಗೆ ಹಾಳಾದರೆ ಒಂದು ದಿನ ನಷ್ಟ, ಬೆಳೆ ಹಾಳಾದರೆ ಒಂದು ವರ್ಷ ನಷ್ಟ. ಆದರೆ ವಿದ್ಯಾಭ್ಯಾಸ ಹಾಳಾದರೇ ಇಡಿ ಬದುಕೆ ನಷ್ಟ ಶಿಕ್ಷಣವಿಲ್ಲದವನ ಬಾಳು ನಾಯಿಗಿಂತ ಕಡೆ ಅಂದಂತೆ ಸರಿಯಾಗಿ ವಿದ್ಯಾಭ್ಯಾಸ ಮಾಡದೆ ಇದ್ದಲ್ಲಿ ಇಡಿ ಜೀವನ ಬರಡಾಗಲಿದೆ ಮಕ್ಕಳು ಎಚ್ಚರಿಕೆವಹಿಸಬೇಕೆಂದು ಶ್ರೀಫಕಿರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ ತಿಳಿಸಿದರು.
ಇಲ್ಲಿನ ಗಣೇಶ ನಗರದ ಎಸ್.ಕೆ.ಪಬ್ಲಿಕ್ ಶಾಲೆಯ 18 ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಓದುವ ವಯಸ್ಸಿನಲ್ಲಿ ಚನ್ನಾಗಿ ಅಭ್ಯಾಸ ಮಾಡಬೇಕು. ಪಾಲಕರ ಆಸೆಯಂತೆ ನಿರಂತರ ವಿದ್ಯಾಭ್ಯಾಸ ಮಾಡುವ ಮೂಲಕ ಕಲಿತ ಶಾಲೆಗೆ ಮತ್ತು ಪಾಲಕರ ಕೀರ್ತಿ ಹೆಚ್ಚಿಸಬೇಕು. ಖಾಸ್ಗತೇಶ್ವರ ಶಾಲೆ ಕಳೆದ 18 ವರ್ಷಗಳಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸೇವೆ ಸಲ್ಲಿಸುತ್ತಿದೆ. ಸದುಪಯೋಗ ಪಡೆಯುವ ಮೂಲಕ ಉತ್ತಮ ಬದುಕು ರೂಪಿಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕರವೇ ಉಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ ಮಾತನಾಡಿ ವಿದ್ಯಾರ್ಥಿಗಳು ನಿರಂತರ ಶ್ರಮದಿಂದ ಅಭ್ಯಾಸ ಮಾಡಿದ್ದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಯಾವುದೇ ಆಕರ್ಷಣೆಗೆ ಒಳಗಾಗದೆ ವಾಸ್ತವಿಕತೆಯನ್ನು ಅರಿತು ಬದುಕು ಕಟ್ಟಿಕೊಳ್ಳಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಹಾಡು ಹಾಡುವ ಮೂಲಕ ವೀಕ್ಷಕರನ್ನು ರಂಜಿಸಿದರು.
ಸಮಾರಂಭವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಭೀಮನಗೌಡ ಬಿರೆದಾರ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ, ದಸಂಸಮಿತಿಯ ಶಿವಪುತ್ರ ಜವಳಿ, ಕಾನಿಪ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಸಿಆರ್‍ಪಿ ವೀರಭದ್ರಯ್ಯ ಹಿರೇಮಠ, ಶಾರಧಾ ಶಿಕ್ಷಣ ಸಂಸ್ಥೆಯ ಸತ್ಯಂರಡ್ಡಿ, ಉದ್ಯಮಿ ಜಗಧೀಶ ಹೊನ್ಕಲ್, ದೇಶಮುಖ ಕಾಲೇಜಿನ ಶಿವರಾಜ ದೇಶಮುಖ, ಎಸ್.ಕೆ.ಪಬ್ಲಿಕ್ ಹತ್ತಿಗೂಡೂರ ಶಾಲೆ ಪ್ರಾಂಶುಪಾಲ ಸುನೀಲಕುಮರಾ ಲೀಮಾ ಕೇರಳ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೊರಾರ್ಜಿ, ನವೋದಯ ಮತ್ತು ಆದರ್ಶ ವಿದ್ಯಾಲಯ ಶಾಲೆಗೆ ಆಯ್ಕೆಗೊಂಡ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.