ಕೋವಿಡ್-19 ನಿಯಮ ಉಲ್ಲಂಘನೆ 26 ವಾಹನ ಜಪ್ತಿ
ಕೋವಿಡ್-19 ನಿಯಮ ಉಲ್ಲಂಘನೆ 26 ವಾಹನ ಜಪ್ತಿ
yadgiri, ಶಹಾಪುರ: ಸೋಮವಾರದಿಂದ ಕಠಿಣ ಕಫ್ರ್ಯೂ ಜಾರಿಯಾಗುವದರಿಂದ ಪೊಲೀಸ್ ಸಿಬ್ಬಂದಿ ಭಾನುವಾರವೇ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ನೇತೃತ್ವದಲ್ಲಿ ಇಲ್ಲಿನ ಹೆದ್ದಾರಿ ರಸ್ತೆಯ ಮೇಲೆ ಕಾರ್ಯಾಚಾರಣೆಗೆ ಇಳಿದು 19 ಕಾರು, 7 ದ್ವಿಚಕ್ರ ವಾಹನ ಜಪ್ತಿ ಮಾಡಿದರು.
ರಾಜ್ಯ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಸೆಕ್ಷನ್ 24 ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು. ಸಾರ್ವಜನಿಕರು ಅನಗತ್ಯವಾಗಿ ಅಲೆದಾಡಬಾರದು. ಔಷಧಿ, ಆಸ್ಪತ್ರೆಗೆ ಆಗಮಿಸುವವರು ಚೀಟಿ ಹಾಗೂ ಅಗತ್ಯ ದಾಖಲೆಯನ್ನು ತೆಗೆದುಕೊಂಡು ಬರಬೇಕು. ನಮ್ಮ ಸಿಬ್ಬಂದಿ ಪರಿಶೀಲಿಸುವರು. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಜನ ಹಿತಕ್ಕಾಗಿಯೇ ಪೊಲೀಸರು ಹಗಲಿರಳು ಶ್ರಮಿಸುತ್ತಿದ್ದಾರೆ. ನಾಗರಿಕರು ಸಹಕಾರ ನೀqಬೇಕು ಎಂದು ಅವರು ಮನವಿ ಮಾಡಿದರು.
ಎಸ್ಪಿ ಭೇಟಿ: ತಾಲ್ಲೂಕಿನ ಮುಡಬೂಳಕ್ರಾಸ್ ಬಳಿ ಸ್ಥಾಪಿಸಿರುವ ತಪಾಸಣೆ ಕೇಂದ್ರಕ್ಕೆ ಭಾನುವಾರ ಎಸ್ಪಿ ಪಿ.ಕಿಶೋರಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಗೆ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಬೇಕು.ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಠಾಣೆಗೆ ಭೇಟಿಃ ಸ್ಥಳೀಯ ನಗರ ಠಾಣೆಗೂ ಭೇಟಿ ನೀಡಿದ ನೂತನ ಎಸ್ಪಿ ಪಿ.ಕಿಶೋರಬಾಬು ಸೋಮವಾರದಿಂದ ಜಾರಿಯಾಗುವ ಕಠಿಣ ಕಫ್ರ್ಯೂ ಕುರಿತು ಪೊಲೀಸ್ ಸಿಬ್ಬಂದಿಯೊಂದಿಗೆ ಚರ್ಚಿಸಿದರು. ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪಿಐ ಚನ್ನಯ್ಯ ಹಿರೇಮಠ, ಪಿಎಸ್‍ಐ ಶಾಮಸುಂದರ ನಾಯಕ, ಚಂದ್ರಕಾಂತ ಮೆಕಾಲೆ ಪೊಲೀಸ್ ಸಿಬ್ಬಂದಿ ಇದ್ದರು.