ಗಾಂಧೀ, ಶಾಸ್ತ್ರೀಜೀ ಆದರ್ಶ ಮೈಗೂಡಿಸಿಕೊಳ್ಳಿ-ಫಾದರ್ ಕ್ಲೀವನ್ ಗೋಮ್ಸ್

ಗಾಂಧೀ, ಶಾಸ್ತ್ರೀಜೀ ಆದರ್ಶ ರೂಡಿಸಿಕೊಳ್ಳಿ-ಫಾದರ್ ಜೇಮ್ಸ್
yadgiri, ಶಹಾಪುರಃ ಮಕ್ಕಳು ಬಾಲ್ಯದಿಂದಲೇ ಮಹಾತ್ಮರ, ಶರಣರ ಚರಿತ್ರೆಗಳನ್ನು ಓದುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಫಾದರ್ ಕ್ಲೀವನ್ ಗೋಮ್ಸ್ ತಿಳಿಸಿದರು.
ನಗರದ ಸೈಂಟ್ ಪೀಟರ್ ಶಾಲೆಯಲ್ಲಿ ಗಾಂಧಿ, ಶಾಸ್ತ್ರೀಜಿಯವರ ಜಯಂತ್ಯುತ್ಸವ ಅಂಗವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾತ್ಮರಿಬ್ಬರು ಜಗತ್ತು ಕಂಡ ಅತ್ಯದ್ಭುತ ವ್ಯಕ್ತಿಗಳು. ಗಾಂಧೀಜಿಯವರ ಸತ್ಯ, ಅಹಿಂಸೆ ನಡೆ ಹಾಗೂ ಶಾಸ್ತ್ರೀಜಿಯವರ ಪ್ರಾಮಾಣಿಕತೆ, ದೃಢ ನಿರ್ಧಾರ, ಧೈರ್ಯದ ನಡೆ ಕಂಡು ದೇಶ ಮಾತ್ರವಲ್ಲ ಇಡಿ ಜಗತ್ತು ನಿಬ್ಬೆರಗಾಗಿತ್ತು. ದೇಶ ಸ್ವಾತಂತ್ರ್ಯ ಹಾಗು ಅಭಿವೃದ್ಧಿಗೆ ಅವರ ಅಪಾರ ಕೊಡುಗೆ ಇದ್ದು, ದೇಶ ಕಂಡ ಅಪರೂಪದ ವ್ಯಕ್ತಿಗಳಾಗಿದ್ದಾರೆ. ದೇಶ ಸೇವೆಯೇ ಈಶ ಸೇವೆ ಎಂದು ನಂಬಿದ್ದ ಅವರ ಸ್ಮರಣೆ ಅತ್ಯಗತ್ಯ ಎಂದರು.
ನಂತರ ಸರಳ ಕಾರ್ಯಕ್ರಮದಲ್ಲಿ ದೇಶದಲ್ಲಿ ಶಾಂತಿ ಸೌಹಾರ್ಧತೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮತ್ತು ದೇಶ, ಪ್ರಪಂಚದಾದ್ಯಂತ ಹಬ್ಬಿದ ಮಹಾಮಾರಿ ನಾಶಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೊದಲಿಗೆ ಗಾಂಧಿ, ಶಾಸ್ತ್ರೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ರೇವಣ್ಣ ಕಲ್ಬುರ್ಗಿ ಕುಟುಂಬ, ಶ್ರೀನಿವಾಸ್ ಎಂ. ಕುಟುಂಬ, ಭೀಮಣ್ಣ ಪೀರಾಪುರ್ ಕುಟುಂಬಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಆನಿಶಾ, ರೋನಿಕಾ, ಅಂತಪ್ಪ, ಪ್ರಸಾದ್ ಸೇರಿದಂತೆ ಶಾಲಾ ಸಹ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.