ಪ್ರಮುಖ ಸುದ್ದಿ
ಶಹಾಪುರಃ ಸೈಂಟ್ ಪೀಟರ್ಸ್ ಶಾಲೆಗೆ ಉತ್ತಮ ಫಲಿತಾಂಶ
ಶಹಾಪುರಃ ಸೈಂಟ್ ಪೀಟರ್ಸ್ ಶಾಲೆಗೆ ಉತ್ತಮ ಫಲಿತಾಂಶ
ಶಹಾಪುರಃ ನಗರದ ಪ್ರತಿಷ್ಠಿತ ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದೆ.
ಒಟ್ಟು 45 ವಿದ್ಯಾರ್ಥಿಗಳಲ್ಲಿ ಅಗ್ರಶ್ರೇಣಿಯಲ್ಲಿ ಪ್ರಶಾಂತ ಪೀರಾಪುರ 596 (95.36%), ಶ್ವೇತಾ ರಾಜಶೇಖರ 580 (92.80%) ಶೇಖ ಸಮೀರ್ 566 (90.56%), ರಾಹುಲ್ ಶಾಂತಕುಮಾರ 564 (90.24%), ಕೀರ್ತನಾ ಶಿವಲಿಂಗಪ್ಪ 562 (89.92%) ಶಾಂಭವಿ ಶರಣಪ್ಪ 547 (87.52%) ಪ್ರಜ್ಞಾ ಅಶೋಕ 541 (86.56%) ಅಂಕಗಳನ್ನು ಪಡೆಯುವ ಮೂಲಕ ಶಾಲಾ ಕೀರ್ತಿ ಹೆಚ್ಚಿಸಿದ್ದಾರೆ. ಅಲ್ಲದೆ ಉಳಿದ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಪ್ರಮಿಳಾ ಡಿಸೋಜಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಫಾದರ್ ಕ್ಲೀವನ್ ಗ್ಲೋಮ್ಸ್ ಸೇರಿದಂತೆ ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.