ಪ್ರಮುಖ ಸುದ್ದಿ
ಸಂಡೆ ಕರ್ಫ್ಯೂ ಕ್ಯಾನ್ಸಲ್ ಗೆ ಸಿಎಂ ಸೂಚನೆ
ಸಂಡೆ ಕರ್ಫ್ಯೂ ಕ್ಯಾನ್ಸಲ್ ಗೆ ಸಿಎಂ ಸೂಚನೆ
ಬೆಂಗಳೂರಃ ಪ್ರತಿ ಸಂಡೆ ಕರ್ಫೂ ಜಾರಿ ನಿಯಮಗೊಳಿಸಿದ್ದ ರಾಜ್ಯ ಸರ್ಕಾರ ಇದೀಗ ನಾಳೆ ಸಂಡೆ ಕರ್ಫೂ ಕ್ಯಾನ್ಲಲ್ ಮಾಡುವಂತೆ ಸಿಎಂ ಯಡಿಯುರಪ್ಪ ಸೂಚನೆ ನೀಡಿದ್ದಾರೆ.
ಅಂದ್ರೆ ನಾಳೆ ಭಾನುವಾರ ಕರ್ಫ್ಯೂ ಇರುವದಿಲ್ಲ. ಎಂದಿನಂತೆ ದೈನಂದಿನ ಚಟುವಟಿಕೆ ವ್ಯಾಪಾರ ವಹಿವಾಟು ನಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.
ರಾಜ್ಯ ಸರ್ಕಾರ ಪ್ರತಿ ಸಂಡೆ ಹೊರಡಿಸಿದ್ದ ಕರ್ಫ್ಯೂ ಆದೇಶವನ್ನು ರದ್ದುಗೊಳಿಸಿದ್ದು, ಕಳೆದ ವಾರ ಭಾನುವಾರ ಕರ್ಫ್ಯೂ ಜಾರಿಗೊಳಿಸಿ ನೋಡಲಾಗಿ ಇದರಿಂದ ಯಾವುದೇ ಇಪಯೋಗವಾಗಿಲ್ಲ ಎಂಬುದು ಸರದಕಾರದ ಅರಿವೆಗೆ ಬಂದ ಹಿನ್ನೆಲೆ ನಾಳೆ ನಿಗದಿಯಾಗಿದ್ದ ಕರ್ಫ್ಯೂ ತೆರವುಗೊಳಿಸುವ ತೀರ್ಮಾನ ಮಾಡಿದೆ ಎನ್ನಲಾಗಿದೆ.
ಹೀಗಾಗಿ ನಾಳೆ ಆಟೋ, ಅಂಗಡಿ ಬಸ್ ಸಂಚಾರ, ಪಾರ್ಕ್ ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಯಥಾಸ್ಥಿತಿ ವ್ಯಾಪಾರ, ವಹಿವಾಟು ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.