ಭಯೋತ್ಪಾದನೆ ವಿಶ್ವಕ್ಕೆ ದೊಡ್ಡ ಬೆದರಿಕೆಃಸುಷ್ಮಾ ಸ್ವರಾಜ್
ಭಯೋತ್ಪಾದನೆ ವಿಶ್ವಕ್ಕೆ ದೊಡ್ಡ ಬೆದರಿಕೆಃಸುಷ್ಮಾ ಸ್ವರಾಜ್
ಭಯೋತ್ಪಾದನೆ ಎಂಬುದು ವಿಶ್ವಕ್ಕೆ ದೊಡ್ಡ ಬೆದರಿಕೆ ಈ ಕುರಿತು ವಿಶ್ವಸಂಸ್ಥೆ ನಿಗಾವಹಿಸಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ ಎಂದು ವಿದೇಶಾಂಗ ಸಚಿವರು ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಅವರು, ಪಾಕಿಸ್ಥಾನ ಜಿಹಾದಿಗಳಿಗೆ ಹೆಚ್ಚು ಒತ್ತು ನೀಡುತ್ತಿದೆ.
ನಾವು ಬಡತನದ ವಿರುದ್ಧ ಹೋರಾಡಿದರೆ, ಪಾಕಿಸ್ಥಾನ ಭಾರತದ ವಿರುದ್ಧ ಹೋರಾಡುತ್ತಿದೆ ಎಂದು ಕುಟುಕಿದರು.
ನೆರೆಯ ಪಾಕಿಸ್ತಾನ ಹಲವು ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿದೆ. ಭಯೋತ್ಪಾದನೆಯಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದು ಇದಲ್ಲದೆ ಇದನ್ನು ಪಾಕಿಸ್ಥಾನ ಅರ್ಥೈಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಒಟ್ಟಾರೆ ಪಾಕಿಸ್ತಾನದ ಪಾಪಕೃತ್ಯಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಪಾಕಿಸ್ತಾನದ ಕಾರ್ಯವೈಕರಿಯನ್ನು ಸಾಮಾನ್ಯ ಸಭೆಯಲ್ಲಿ ಸ್ವರಾಜ್ ಅವರು ಸಮರ್ಪಕವಾಗಿ ದಾಖಲಿಸಿದರು.
ಅಲ್ಲದೆ ಮರಣ ಮತ್ತು ಅಮಾನವೀಯತೆಯ ವಿಶ್ವದ ಅತಿದೊಡ್ಡ ರಫ್ತುದಾರ ಎನಿಸಿದ ಪಾಕಿಸ್ಥಾನ ದೇಶವು ಈ ವೇದಿಕೆಯಿಂದ ಮಾನವೀಯತೆ ಬಗ್ಗೆ ಬೋಧಿಸುವುದರ ಮೂಲಕ ಬೂಟಾಟಿಕೆಯ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಟೀಕಿಸಿದರು.