ಪ್ರಮುಖ ಸುದ್ದಿ
ಉಕ ಭಾಗದಲ್ಲಿ ಇನ್ನೂ ಮೂರು ದಿನ ಮಳೆಃ ಯಲ್ಲೋ ಅಲರ್ಟ್ ಘೋಷಣೆ
ಉಕ ಭಾಗ ಇನ್ನೂ ಮೂರು ದಿವಸ ಮಳೆಃ ಯಲ್ಲೋ ಅಲರ್ಟ್ ಘೋಷಣೆ
ಬೆಂಗಳೂರಃ ಈಗಾಗಲೇ ಭಾರಿ ಮಳೆಯಿಂದ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕಕ್ಕೆ ಮತ್ತೆ ಶಾಕಿಂಗ್ ಸುದ್ದಿವೊಂದನ್ನು ಹವಾಮಾನ ಇಲಾಖೆ ನೀಡಿದೆ.
ಹೌದು ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಮೂರು ನಾಲ್ಕು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮತ್ತೆ ಮುನ್ಸೂಚನೆ ನೀಡಿದೆ.
ಈಗಾಗಲೇ ಭಾರಿ ಮಳೆಯಿಂದ ಅಪಾರ ಬೆಳೆ ಹಾನಿ, ಗ್ರಾಮಗಳು ಮುಳುಗಡೆಯಿಂದ ಚಿಂತಿತರಾಗಿದ್ದ ಜನಕ್ಕೆ ಇನ್ನು ಮೂರು ದಿನಗಳವರೆಗೆ ಮಳೆ ಬರುವ ಸಾಧ್ಯತೆ ವ್ಯಕ್ತವಾದ ಹಿನ್ನೆಲೆ ಕಾಳಜಿ ಕೇಂದ್ರದಲ್ಲಿಯೇ ಮುಂದುವರೆಯಬೇಕಾಗಿದೆ.
ಉಕದ ಕಲಬುರ್ಗಿ, ರಾಯಚೂರ, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ ಸೇರಿದಂತೆ ಬಳ್ಳಾರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಯಲ್ಲೋ ಅಲರ್ಟ್ ಘೋಷಿಸಿದೆ ಎನ್ನಲಾಗಿದೆ.