ಅತ್ಯಾಚಾರದ ಕೇಸ್ ಹಾಕ್ತೀನಿಃ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಅವಾಜ್ ಹಾಕಿದ ಲೇಡಿ
ಅತ್ಯಾಚಾರದ ಕೇಸ್ ಹಾಕ್ತೀನಿಃ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಅವಾಜ್ ಹಾಕಿದ ಲೇಡಿ
ಸಾಲ ಕೇಳಲು ಬಂದ ಸಿಬ್ಬಂದಿಯನ್ನು ತಾನೇ ಎಳೆದಾಡಿ ಅತ್ಯಾಚಾರ ಕೇಸ್ ಹಾಕುವೆ ಎಂದ ಕಿರಿಕ್ ಲೇಡಿ
ಬೆಂಗಳೂರಃ ಪಡೆದ ಸಾಲವನ್ನು ಮರು ಪಾವತಿಸುವಂತೆ ಕೇಳಲು ಮನೆಗೆ ಬಂದಿದ್ದ ಬ್ಯಾಂಕ್ ಸಿಬ್ಬಂದಿ ಮೇಲೆ ದರ್ಪ ತೋರಿದ ಮಹಿಳೆಯೊಬ್ಬಳು, ಬ್ಯಾಂಕ್ ಸಿಬ್ಬಂದಿ ಯನ್ನು ತಾನೇ ಎಳೆದಾಡಿ ನಿಮ್ಮ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವೆ ಎಂದು ಕನ್ನಡ, ಇಂಗ್ಲಿಷ್ ನಲ್ಲಿ ಆವಾಜ್ ಹಾಕಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.
ಬ್ಯಾಂಕಿನಲ್ಲಿ ಆ ಮಹಿಳೆ ಪಡೆದ ಸಾಲ ವಸೂಲಾತಿಗೆ ಬಂದಿದ್ದ ಮೂವರು ಬ್ಯಾಂಕ್ ಸಿಬ್ಬಂದಿ ವಿರುದ್ಧವೆ ಕೂಗಾಡಿ, ಅತ್ಯಾಚಾರ, ಹಲ್ಲೆ ಮಾಡಿದ್ದಾರೆ ಎಂದು ಕೇಸ್ ದಾಖಲಿಸುವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಿಮ್ಮಗಳ ಫೋಟೊ ಹಾಕಿ ಮಾನ ಹರಾಜ ಹಾಕುವ ಅಲ್ಲದೆ ಪ್ರಕರಣ ದಾಖಲಾಗುವಂತೆ ಮಾಡುವೆ ಎಂದು ಬೆದರಿಕೆಯೊಡ್ಡಿದ್ದಾಳೆ.
ಸಿಬ್ಬಂದಿ ಓರ್ವ ಕಾಲು ಬೀಳ್ತೀನಿ ಬಿಟ್ಟುಬಿಡಿ ತಾಯಿ ಎಂದರು ದರ್ಪ ತೋರಿದ ಮಹಿಳೇ ಕಿರಿಕ್ ಲೇಡಿ ಹಿರಿಯ ಬ್ಯಾಂಕ್ ಸಿಬ್ಬಂದಿಗಳ ಹತ್ರ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವಿಲ್ಲದೆ ಕೂಗಾಡಿದ್ದಾಳೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆ ಕಿರಿಕ್ ಲೇಡಿಗೆ ಛೀಮಾರಿ ಹಾಕಿದ್ದಾರೆ. ಮೆಸೇಜ್ ಮಾಡುವ ಮೂಲಕ ದರ್ಪದ ಲೇಡಿಗೆ ಜನ ತಿವಿದಿದ್ದಾರೆ.