ಪ್ರಮುಖ ಸುದ್ದಿ
ಮಾಜಿ ಡಿಸಿಎಂ ಪರಮೇಶ್ವರಗೆ ಐಟಿ ಶಾಕ್
ಪರಮೇಶ್ವರರ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ
ಬೆಂಗಳೂರಃ ಮಾಜಿ ಡಿಸಿಎಂ ಕಾಂಗ್ರೆಸ್ ನಾಯಕ ಪರಮೇಶ್ವರರ ಮನೆ, ಕಚೇರಿ ಮತ್ತು ಅವರ ಒಡೆತನದ ನೆಲಮಂಗಲದ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಸೇರಿದಂತೆ ತುಮಕೂರಿನಲ್ಲಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇಂದು ಬೆಳ್ಳಂಬೆಳಗ್ಗೆ 10 ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ನೆಲಮಂಗಲದ ಮೆಡಿಕಲ್ ಕಾಲೇಜು ಮತ್ತು ಇಂಜಿನಿಯಂರಿಂಗ್ ಕಾಲೇಜು ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ತುಮಕೂರಿನಲ್ಲಿ ಸಿದ್ಥಾರ್ಥ ಪದವಿ ಇತರೆ ಕಾಲೇಜುಗಳ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
—————
ಐಟಿ ಅಧಿಕಾರಿಗಳು ನನ್ನ ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ. ಪರಿಶೀಲನೆ ನಡೆಸಲಿ. ನಾನೇನು ದಾಳಿ ಮಾಡಬೇಡಿ ಎಂದು ಹೇಳಕ್ಕಾಗುತ್ತಾ..ನಾನು ಕಾನೂನು ಮೀರಿ ಅಥವಾ ಮುಚ್ಚಿಟ್ಟು ಏನಾದರೂ ಮಾಡಿದ್ದಲ್ಲಿ ಕ್ರಮಕೈಗೊಳ್ಳಲಿ ಎಂದು ಜಿ.ಪರಮೇಶ್ವರ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ಧಾರೆ.
–ಜಿ.ಪರಮೇಶ್ವರ. ಮಾಜಿ ಡಿಸಿಎಂ.