ಪ್ರಮುಖ ಸುದ್ದಿ
ಲಡಾಕ್ ಸಂಘರ್ಷಃ ಭಾರತದ 20 ಯೋಧರು ಹುತಾತ್ಮರಾದರೇ, ಚೀನಾದ 43 ಯೋಧರ ಹತ್ಯೆ
ಲಡಾಕ್ ಸಂಘರ್ಷಃ ಭಾರತದ 20 ಯೋಧರು ಹುತಾತ್ಮರಾದರೇ, ಚೀನಾದ 43 ಯೋಧರ ಹತ್ಯೆ
ವಿವಿ ಡೆಸ್ಕ್ಃ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಮಂಗಳವಾರ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದರೆ, ಭಾರತದ ಪ್ರತಿದಾಳಿಗೆ ಚೀನಾದ 43 ಯೋಧರು ಹತರಾಗಿ 100 ಕ್ಕೂ ಹೆಚ್ಚು ಯೋಧರು ಗಾಯಗೊಂಡ ಘಟನೆ ನಡೆದಿದೆ.
ಈ ಕುರಿತು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿ ಮಾಡಿದೆ. ಅಲ್ಲದೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ್ತಿ ವಾಂಗ್ ವೆನ್ವೆನ್ ಎಂಬುವರು ಟ್ವೀಟ್ ಮಾಡಿ ಕಳೆದ ರಾತ್ರಿ ಭಾರತ – ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಐವರು ಚೀನಾ ಯೋಧರು ಹತ್ಯೆಯಾಗಿದ್ದು, 11 ಜನ ಗಾಯಗೊಂಡಿದ್ದಾರೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.