ತರಿಕೇರಿ ಕ್ಷೇತ್ರಃ ಮಾಜಿ ಶಾಸಕ ಎಸ್.ಎಂ.ನಾಗರಾಜ ಮೇಲೆ ಮಧ್ಯರಾತ್ರಿ ದುಷ್ಕರ್ಮಿಗಳಿಂದ ಹಲ್ಲೆ
ಸ್ವತಂತ್ರ ಅಭ್ಯರ್ಥಿ ಗೋಪಿಕೃಷ್ಣ ಪರ ಪ್ರಚಾರ ಮಾಡುತ್ತಿರುವ ಹಿನ್ನೆಲೆ ಹಲ್ಲೆ-ಆರೋಪ
ತರಿಕೇರಿ ಕ್ಷೇತ್ರಃ ಮಾಜಿ ಶಾಸಕ ಎಸ್.ಎಂ.ನಾಗರಾಜ ಮೇಲೆ ಮಧ್ಯರಾತ್ರಿ ದುಷ್ಕರ್ಮಿಗಳಿಂದ ಹಲ್ಲೆ
ಸ್ವತಂತ್ರ ಅಭ್ಯರ್ಥಿ ಗೋಪಿಕೃಷ್ಣ ಪರ ಪ್ರಚಾರ ಮಾಡುತ್ತಿರುವ ಹಿನ್ನೆಲೆ ಹಲ್ಲೆ-ಆರೋಪ
ಬೆಂಗಳೂರಃ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮತಕ್ಷೇತ್ರದಲ್ಲಿ ಸ್ವಂತಂತ್ರ ಅಭ್ಯರ್ಥಿ ಗೋಪಿಕೃಷ್ಣ ಬೆಂಬಲಕ್ಕೆ ನಿಂತು ಕ್ರಿಯಾಶೀಲವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡ ಮಾಜಿ ಶಾಸಕ, ಪ್ರಬಲ ಲಿಂಗಾಯತ ನಾಯಕ ಎಸ್.ಎಂ.ನಾಗರಾಜ ಮನೆ ಮೇಲೆ ರಾತ್ರಿ ಮೂರು ಗಂಟೆ ಸುಮಾರಿಗೆ ದುಷ್ಜರ್ಮಿಗಳು ಹಲ್ಲೆ ನಡೆಸಿ ಹಣ ದೋಚಿದ ಘಟನೆ ನಡೆದಿರುವ ಕುರಿತು ಹಲ್ಲೆಗೊಳಗಾದ ಮಾಜಿ ಶಾಸಕರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತರಿಕೇರಿ ಕ್ಷೇತ್ರದಲ್ಲಿ ಸಮಾಜ ಸೇವಕ ಗೋಪಿಕೃಷ್ಣ ಇದು ಮೂರನೇಯ ಬಾರಿ ಸ್ಪರ್ಧಿಸುತ್ತಿದ್ದು, ಮೊದಲನೇಯ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಕೇವಲ ಅಂದಾಜು 500 ಮತಗಳ ಅಂತರದಿಂದ ಸೋಲನುಭವಿಸಿದ್ದರು, ಆಗ ಜೆಡಿಎಸ್ ಟಿಕೆಟ್ ನೀಡದ್ದರಿಂದ ಸ್ವತಂತ್ರ ಸ್ಪರ್ಧೆ ಮಾಡಿದ್ದರು, ತದ ನಂತರ ಬಿಜೆಪಿ ಸೇರಿದ್ದು,ಅವರ ಪತ್ನಿ ಜಿಲ್ಲ ಪಂಚಾಯತ್ ಸ್ಪರ್ಧಿ ಅಭೂತಪೂರ್ವ ಗೆಲವು ಸಾಧಿಸಿದ್ದರು.
2018 ರಲ್ಲಿ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿತು. ಆಗಲು ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದರು. ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಸೇರ್ಪಡೆ ವೇಳೆ ಡಿಕೆಶಿ, ಮಾಜಿ ಸಿಎಂ ಸಿದ್ರಾಮಯ್ಯ ಕೈ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಗೋಪಿಕೃಷ್ಣ ಆರೋಪ ಮಾಡಿರುವಂತೆ ಅವರಿಂದ ಸಾಕಷ್ಟು ಹಣ ಪೀಕಿದ ನಾಯಕರು ಕೈ ಟಿಕೆಟು ನೀಡಲಿಲ್ಲ.
ಗೋಪಿಕೃಷ್ಣ ಅವರ ಪತ್ನಿ ಸೇರಿದಂತೆ ಅಪಾರ ಅವರ ಅಭಿಮಾನಿ ಬಳಗ ಕಣ್ಣೀರಿಟ್ಟಿತು. ಮೂರು ಪಕ್ಷಗಳಿಂದ ಅನ್ಯಾಯಕ್ಕೊಳಗಾದ ಸಮಾಜ ಸೇವಕ ಗೋಪಿಕೃಷ್ಣ ಅವರು ಪ್ರಸ್ತುತ 2023 ಎಲ್ಲರ ಒತ್ತಾಯದ ಮೇರೆಗೆ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅಲ್ಲದೆ ವಿಶೇಷವಾಗಿ ಮಾಜಿ ಶಾಸಕರು, ಲಿಂಗಾಯದ ಪ್ರಬಲ ಮುಖಂಡರು ಗೋಪಿಕೃಷ್ಣ ಪರವಾಗಿ ನಿಂತಿರುವ ಕಾರಣ ಎದುರಾಳಿ ಸೋಲಿನಭೀತಿಯಲ್ಲಿ ಬೆದರಿಕೆಯೊಡ್ಡುವದು, ಹಲ್ಲೆ ನಡೆಸುವಂತ ಹೀನ ಕೃತ್ಯಗಳಿಗೆ ಇಳಿದಿದ್ದಾರೆಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.
ಸಾಮಾಜಿಕ ನ್ಯಾಯದ ತತ್ವ ಪರಿಪಾಲನೆ ಮಾಡುತ್ತೇನೆ ಎಂದು ಬೀಗುವ ಸಿದ್ರಾಮಯ್ಯ ನಾನು ಮಡಿವಾಳ ಸಮಾಜದವ ಎಂಬ ಕಾರಣಕ್ಕೆ ಟಿಕೆಟ್ ನೀಡಲಿಲ್ಲ. ಮೂರು ಪಕ್ಷದವರು ನಾನು ಹಿಂದುಳಿದ ಮಡಿವಾಳ ಸಮಾಜದ ವ್ಯಕ್ತಿ ಎಂಬ ಉದ್ದೇಶಕ್ಕಾಗಿಯೇ ಟಿಕೆಟ್ ನೀಡಲಿಲ್ಲ. ಎಲ್ಲಿದೆ ಸಾಮಾಜಿಕ ನ್ಯಾಯ.? ಬೊಗಳೆ ಬಿಡುವವರೇ ಇಂಥವರನ್ನು ನಂಬಬೇಡಿ. ಭಾಷಣ ಮಾಡುವಾಗ ಮಾತ್ರ ಸಾಮಾಜಿಕ ನ್ಯಾಯ, ಸಂವಿಧಾನ ನೆನಪು ಮಾಡುವ ಇವರು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಸ್ವಂತ ಅನುಭವ. ಇವರು ನನಗೆ ಭಾಷೆ ಕೊಟ್ಟು ಮೋಸ ಮಾಡಿದ್ದಾರೆ. ಸಣ್ಣ ಸಮುದಾಯದವರಿಗೆ ಯಾರೊಬ್ಬರು ಕೈ ಹಿಡಿಯಲ್ಲ. ಎಲ್ಲಾ ಜಾತಿ ಲೆಕ್ಕಚಾರ. ನಾವೆಷ್ಟೆ ಉತ್ತಮ ಅತ್ಯುತ್ತಮ ರಿದ್ದು,ಎಲ್ಲಾ ರೀತಿಯಿಂದ ಸಮರ್ಥರಿದ್ದರೂ ಇವರು ಕೈ ಕೊಡ್ತಾರೆ ಇವರಿಂದ ಕಾರ್ಯಕರ್ತರು ಎಚ್ಚರಿಕೆವಹಿಸುವದು ಉತ್ತಮ.
-ಗೋಪಿಕೃಷ್ಣ. ತರಿಕೇರಿ ಕ್ಷೇತ್ರ ಸ್ವತಂತ್ರ ಅಭ್ಯರ್ಥಿ.
————————–
ಗೋಪಿಕೃಷ್ಣ ಅವರು ಎರಡು ದಶಕದಿಂದ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಬಡವರಿಗಾಗಿ ನಾಲ್ಕೈದು ಅಂಬ್ಯುಲೆನ್ಸ್ ಸೇವೆ ಇಟ್ಟಿದ್ದಾರೆ. ಕೋವಿಡ್ ವೇಳೆ ಸಾಕಷ್ಟು ಸಹಕಾರಿ ಕೆಲಸಗಳನ್ನು ಮಾಡಿದ್ದಾರೆ. ಉಚಿತ ಅಂಬ್ಯುಲೆನ್ಸ್ ಸೇವೆ ನಿರಂತರ ಕ್ಷೇತ್ರದ ಜನರಿಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದಾರೆ. ಉತ್ತಮ ಜನಸೇವಕ ಅವರಾಗಿದ್ದು, ಕ್ಷೇತ್ರದ ಜನತೆ ಇಂದು ಗೋಪಿಕೃಷ್ಣ ಪರವಾಗಿದ್ದಾರೆ. ಗೆಲುವಿನ ಹೊಸಿಲಲ್ಲಿ ಅವರಿರುವದರಿಂದ ಎದುರಾಳಿಗಳಿಗೆ ಬೇರೆ ಅಸ್ತ್ರವಿಲ್ಲ. ಜಾತಿ ರಾಜಕಾರಣವು ಗೋಪಿಕೃಷ್ಣ ಅವರ ಸೇವೆ ಮುಂದೆ ಗೌಣವಾಗಿದೆ. ಹೀಗಾಗಿ ಇವರ ಬೆಂಬಲವಾಗಿ ನಿಂತ ಮಾಜಿ ಶಾಸಕರ ಮೆನೆಗೆ ದುಷ್ಕರ್ಮಿಗಳನ್ನು ಕಳುಹಿಸಿ ಹಲ್ಲೆ ನಡೆಸುವ ಮೂಲಕ ಕ್ಷೇತ್ರದಲ್ಲಿ ಆತಂಕ ಉಂಟು ಮಾಡುವ ಕೃತ್ಯ ನಡೆಸಿದ್ದಾರೆ. ಇದು ಖಂಡನೀಯ. ಕ್ಷೇತ್ರದ ಮತದಾರರು ಎದುರಾಳಿಗಳ ಈ ಕೃತ್ಯ ಮನನವಾಗಿದ್ದು, ಈ ಬಾರಿ ಕ್ಷೇತ್ರದ ಸೇವಕ ಗೋಪಿಕೃಷ್ಣ ಅವರಿಗೆ ಆಶೀರ್ವಾದ ಮಾಡುವದು ನಿಶ್ಚಿತವಾಗಿದೆ.
– *ಕಡೂರ ಮಂಜು.*