ಪ್ರಮುಖ ಸುದ್ದಿ
ಶಹಾಪುರಃ ಸಿಡಿಲು ಬಡಿದು ಬಾಲಕ ಸಾವು
ಸಿಡಿಲು ಬಡಿದು ಬಾಲಕ ಸಾವು
ಯಾದಗಿರಿಃ ಹೊಲದಲ್ಲಿ ಮೆಣಸಿನ ಕಾಯಿ ರಾಶಿ ಮುಗಿಸಿ ಗುಡ್ಡೆ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಮಳೆ ಬರುತ್ತಿರುವ ಕಾರಣ ಬಾಲಕನೋರ್ವ ಮೆಣಸಿನಕಾಯಿ ಗುಡ್ಟೆಗೆ ತಾಡಪಲ್ ಹೊಚ್ಚಲು ಹೋದ ಸಂದರ್ಭ ಆಕಸ್ಮಿಕವಾಗಿ ಸಿಡಿಲು ಬಡಿದು ಸ್ಥಳದಲ್ಲಿಯೇ ಅಸುನೀಗಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರ ಗ್ರಾಪಂ ವ್ಯಾಪ್ತಿಯ ತಿಪ್ಪಿನಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಸಿಡಿಲಿಗೆ ಬಲಿಯಾದ ಬಾಲಕನ ಹೆಸರು ಐತೇಶಾಮ ತಂದೆ ಇಕ್ಬಾಲ್ ಸಾಬ (16) ಎಂದು ತಿಳಿದು ಬಂದಿದೆ.
ಸಂಜೆ 6 ಗಂಟೆ ಸುಮಾರಿಗೆ ಬಿರುಗಾಳಿ ಸಹಿತ ಮಳೆ ಬರುವ ಸಂದರ್ಭದಲ್ಲಿ ಮೆಣಸಿನ ಕಾಯಿ ರಾಶಿಗೆ ಹೊದಿಕೆ ಹೊಚ್ಚಲು ಹೋದಾಗ ಸಿಡಿಲು ಬಡಿದ ಘಟನೆ ನಡೆದಿದೆ.
ಘಟನೆ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.