ಪ್ರಮುಖ ಸುದ್ದಿ
ಪ್ರವಾಸಿಗರನ್ನ ಬಲಿ ತೆಗೆದುಕೊಂಡ ಸಿಡಿಲು
ಪ್ರವಾಸಿಗರನ್ನ ಬಲಿ ತೆಗೆದುಕೊಂಡ ಸಿಡಿಲು
ರಾಜಸ್ಥಾನಃ ಸಿಡಿಲು ಬಡಿದು ಏಕಾಏಕಿ 20 ಜನ ಸಾವಿಗೀಡಾಗಿದ್ದು, 17 ಜನ ಗಾಯಗೊಂಡ ಘಟನೆ ಜೈಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ರವಿವಾರ ನಡೆದಿದೆ.
ಜೈಪುರ, ಝಲವಾರ್, ಧೋಲ್ಪುರ ಜಿಲ್ಲೆಗಳಲ್ಲಿ ಪ್ರತ್ಯೇಕ ಘಟನೆಗಳು ಸಂಭವಿಸಿದ್ದು ಸುಮಾರು 20 ಜನರನ್ನು ಸಿಡಿಲು ಬಲಿ ತೆಗೆದುಕೊಂಡಿದೆ ಎನ್ನಲಾಗಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರ ಜೈಪುರ ಹೊರವಲಯದ ಅಮೆರ್ ಕೋಟೆ ವೀಕ್ಷಣೆಗಾಗಿ ತೆರಳಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟವರಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
ವೀಕ್ಷಣ ಗೋಪುರದ ಬಳಿ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತಿರುವಾಗ ಪ್ರವಾಸಿಗರ ಮೇಲೆ ಸಿಡಿಲು ಏಕಾಏಕಿ ದಾಳಿ ನಡೆಸಿದ್ದು ಮಕ್ಕಳು ಸೇರಿದಂತೆ ಹಲವರನ್ನು ಬಲಿ ತೆಗೆದುಕೊಂಡಿದೆ.
ಮಳೆಗಾಲ ಇದಾಗಿದ್ದರಿಂದ ಸಿಡಿಲು ಬಗ್ಗೆ ಮುಂಜಾಗೃತ ಎಚ್ಚರಿಕೆ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ.