ಎಷ್ಟೇ ಶಸ್ತ್ರಾಸ್ತ್ರ ಹೊಂದಿದ್ದರೂ ರಷ್ಯಾ ಗೆಲ್ಲಲು ಸಾಧ್ಯವಿಲ್ಲ- ಉಕ್ರೇನ್ ಅಧ್ಯಕ್ಷ
ಅಣು ಯುದ್ಧಕ್ಕೆ ಉಕ್ರೇನ್ - ರಷ್ಯಾ ದಾಂಗುಡಿ..?
ಎಷ್ಟೇ ಶಸ್ತ್ರಾಸ್ತ್ರ ಹೊಂದಿದ್ದರೂ ರಷ್ಯಾ ಗೆಲ್ಲಲು ಸಾಧ್ಯವಿಲ್ಲ- ಉಕ್ರೇನ್ ಅಧ್ಯಕ್ಷ
ಅಣು ಯುದ್ಧಕ್ಕೆ ಉಕ್ರೇನ್ – ರಷ್ಯಾ ದಾಂಗುಡಿ..?
ವಿವಿ ಡೆಸ್ಕ್ಃ ಅಣು ಬಾಂಬ್ ಉಡಾವಣೆಗೆ ಸಿದ್ಧತೆ ಮಾಡುಕೊಳ್ಳುವ ಮೂಲಕ ಉಕ್ರೇನ್ ಸಂಪೂರ್ಣ ನಾಶ ಮಾಡುವ ಬೆದರಿಕೆ ಯೊಡ್ಡಿದ ರಷ್ಯಾಗೆ ಉಕ್ರೇನ್ ತಿರುಗೇಟು ನೀಡಿದ್ದಾರೆ.
ರಷ್ಯಾ ಎಷ್ಟೇ ಶಸ್ತ್ರಾಸ್ತ್ರ ಬಳಸಿದರೂ ಗೆಲ್ಲಲು ಸಾಧ್ತವೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆಸ್ಕಿನ್ ದೃತಿಗೆಡದೆ ಪೌರುಷದ ಎಚ್ಚರಿಕೆ ನೀಡಿದ್ದಾರೆ.
ಆದರೆ ಅವರ ಹೇಳಿಕೆ ಹಿಂದೆ ಗಮನಿಸಿದರೆ, ಒಂದಡೆ ನ್ಯಾಟೋ ಪಡೆ ಶಸ್ತ್ರಾಸ್ತ್ರ ಅಭ್ಯಾಸ ನಡೆಸುತ್ತಿದೆ. ಅಲ್ಲದೆ ನ್ಯಾಟೋ ಪ್ರಮುಖ ಅಮೇರಿಕಾ ಅಧ್ತಕ್ಷ ರಷ್ಯಾಗೆ ನೇರವಾಗಿ ಎಚ್ಚರಿಕೆ ನೀಡಿದೆ. ಈ ಮಧ್ಯ ನ್ಯಾಟೋ ಶಸ್ತ್ರಾಸ್ತ್ರ ಸೌಲಭ್ಯವನ್ನು ಉಕ್ರೇನ್ ದೇಶಕ್ಕೆ ಒದಗಿಸುತ್ತಿವೆ. ಅಲ್ಲದೆ ಯಾವುದೇ ಗಳಿಗೆಯಲ್ಲಿ ನ್ಯಾಟೋ ಪಡೆ ಎಂಟ್ರಿ ಕೊಡಬಹುದು.
ಹಾಗೇನಾದರೂ ಆದ್ರೆ ಮೂರನೇಯ ಮಹಾ ಯುದ್ಧ ಆರಂಭವಾದಂತೆ. ಆಗ ಇಡಿ ಜಗತ್ತು ದುಸ್ಥಿತಿಗೆ ತಲುಪಲಿದೆ. ಹೀಗಾಗಿ ಪ್ರತಿ ದೇಶ ಮುಂದಾಲೋಚನೆ ಮಾಡತ್ತಿವೆ. ಮೂರನೇಯ ಮಹಾಯುದ್ಧದ ಭೀತಿ ಎದುರಿಸುವಂತಾಗಿದೆ.