ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಯಶಸ್ಸು ಕಂಡ ಚೆಲುವೆ ಆಶ್ನಾ ಚೌಧರಿ
ನವದೆಹಲಿ: ಪ್ರತಿಭಾವಂತ ಸುರಸುಂದರಿಯಾದ ಆಶ್ನಾ ಚೌಧರಿ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ. ಅವರ ಸಕ್ಸಸ್ ಸ್ಟೋರಿ ನಿಜಕ್ಕೂ ಸ್ಪೂರ್ತಿದಾಯಕ.
ಆಶ್ನಾ ಚೌಧರಿ ಅವರು ಗಾಜಿಯಾಬಾದ್ ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಓದಿದರು. ಅವರು ತಮ್ಮ 12 ನೇ ಬೋರ್ಡ್ ಪರೀಕ್ಷೆಯನ್ನು ಮಾನವಿಕ ವಿಷಯಗಳಲ್ಲಿ ಪಾಸ್ ಮಾಡಿದ್ದಾರೆ.
2019 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮಾಡಿದ್ದಾರೆ. ಅವರು ದೆಹಲಿಯಲ್ಲಿರುವ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪದವಿಯ ನಂತರ, ಆಶ್ನಾ 1 ವರ್ಷ ವಿರಾಮ ತೆಗೆದುಕೊಂಡು ಬಳಿಕ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.
ಆದರೆ ಆಶ್ನಾ ಯುಪಿಎಸ್ಸಿ ಪರೀಕ್ಷೆಯ ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ ವಿಫಲರಾಗಿದ್ದರು. ಬಳಿಕ ಮೊದಲ ಪ್ರಯತ್ನಕ್ಕಾಗಿ, ಅವರು 1 ವರ್ಷದ ವಿರಾಮವನ್ನು ತೆಗೆದುಕೊಂಡರು. ಸುಮಾರು 5 ತಿಂಗಳ ಕಾಲ ವಾಜಿರಾಮ್ ಮತ್ತು ರವಿ ಅವರ ಆನ್ ಲೈನ್ ಪೋರ್ಟಲ್ ನಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಂಡರು.
ಪದವಿ ಮುಗಿದ ನಂತರವೇ UPSC ಪರೀಕ್ಷೆ ನೀಡಲು ನಿರ್ಧರಿಸಿದ್ದರು. ಇದಕ್ಕಾಗಿ ಇಡೀ ಪಠ್ಯಕ್ರಮವನ್ನು ಸ್ಕ್ಯಾನ್ ಮಾಡಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನೋಡಿ ನಂತರ ತನ್ನ ತಂತ್ರಗಾರಿಕೆಯನ್ನು ರೂಪಿಸಿದ್ದರು.ನಂತರ ತಮ್ಮ ಮೂರನೇ ಪ್ರಯತ್ನದಲ್ಲಿ UPSC CSE 2022 ಪರೀಕ್ಷೆಯಲ್ಲಿ 116 ನೇ ರ್ಯಾಂಕ್ ಗಳಿಸಿದ್ದಾರೆ.