ಪ್ರಮುಖ ಸುದ್ದಿ

ಮಠಾಧೀಶರೊಂದಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸಭೆ, ಭಕ್ತಾಧಿಗಳಿಗೆ ಲಸಿಕಾಕರಣಕ್ಕೆ ಮನವೊಲಿಸಲು ಮನವಿ

ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಲಸಿಕಾಕರಣಕ್ಕೆ ಮನವೊಲಿಸಲು ಜಿಲ್ಲಾಧಿಕಾರಿ ಮನವಿ

ಯಾದಗಿರಿ: ಕೋವಿಡ್-19 ನಿಯಂತ್ರಣಕ್ಕೆ ಲಸಿಕಾಕರಣ ಅಭಿಯಾನಕ್ಕೆ ಮಠಾಧೀಶರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಭಕ್ತರಿಗೆ ಲಸಿಕಾಕರಣಕ್ಕೆ ಮನವೊಲಿಸಿ ಕೋವಿಡ್ ಮುಕ್ತ ಜಿಲ್ಲೆಯಾಗಿಸುವ ಗುರಿಗೆ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೋವಿಡ್ ಲಸಿಕಾಕರಣದಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸುವಲ್ಲಿ ಜಿಲ್ಲಾಮಟ್ಟದ ಮಠದ ಮಠಾಧೀಶರು, ದೇವಸ್ಥಾನಗಳ ಆಡಳಿತ ಮಂಡಳಿಯವರು ಅವರ ಧಾರ್ಮಿಕ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಮನವೊಲಿಸುವ ಕುರಿತ ಸಭೆಯಲ್ಲಿ ಅವರು ಮನವಿ ಮಾಡಿದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸತತವಾಗಿ ಶ್ರಮಿಸುತ್ತಿದೆ. ಲಸಿಕಾಕರಣದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಾಗಿದೆ. ಅವರು ಸಹಕಾರ ಕೊಟ್ಟರೆ ಮಾತ್ರ 3 ನೇ ಅಲೆ ತಡೆಯಲು ಸಾಧ್ಯ.ಈಗಾಗಲೇ ಜಿಲ್ಲೆಯಲ್ಲಿ ಲಸಿಕಾಕರಣ ತೀವ್ರಗತಿಯಲ್ಲಿ ನಡೆಯುತ್ತಿದೆ. ಆದರೂ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಲಸಿಕಾಕರಣಕ್ಕೆ ಮನವೊಲಿಸಿ ಸ್ವಾಮೀಜಿಯವರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಸ್ವಾಮೀಜಿಯವರ ಮಾತನ್ನು ಮಠಕ್ಕೆ ಬರುವ ಭಕ್ತಾದಿಗಳು ಶ್ರದ್ಧೆಯಿಂದ ಪಾಲಿಸುತ್ತಾರೆ. ಜನರಲ್ಲಿ ಇರುವ ಅವೈಜ್ಞಾನಿಕ ವಿಚಾರವನ್ನು ತೊಲಗಿಸಲು ಮಠಾಧೀಶರಿಂದ ಮಾತ್ರ ಸಾಧ್ಯ ಎಂದರು.ಲಾಕ್ ಡೌನ್ ಕಠೀಣ ಸಂದರ್ಭದಲ್ಲಿ ಅನೇಕ ಮಠಾಧೀಶರು ಮಾಡಿದ ಸಾಮಾಜಿಕ ಕಾರ್ಯಗಳನ್ನು ಜಿಲ್ಲಾಧಿಕಾರಿ ಶ್ಲಾಘಿಸಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇಕಡಾ 65 ರಷ್ಟು ಮೊದಲ ಡೋಸ್ ಹಾಗೂ ಶೇಕಡಾ 30 ರಷ್ಟು 2 ನೇ ಡೋಸ್ ಪೂರ್ಣಗೊಂಡಿರುತ್ತದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸಬೇಕು ಎಂದರು.

ಕೆಲವರು ಮದ್ಯಪಾನ ಸೇವಿಸುವುದರಿಂದ ಲಸಿಕೆಗೆ ಹಿಂದೇಟು;

ಕೆಲವರಿಗೆ ಲಸಿಕಾಕರಣ ನಂತರ ಮೈ, ಕೈ ನೋವು ಸಹಜವಾಗಿ ಕಾಣುತ್ತದೆ. ಮದ್ಯಪಾನ ಸೇವಿಸುವರು ಅಡ್ಡ ಪರಿಣಾಮಗಳು ಆಗಬಹುದೆಂದು ಲಸಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಖಂಡಿತವಾಗಿಯೂ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಇಲ್ಲಿಯವರೆಗೆ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮಗಳು ಆಗಿಲ್ಲ. ಮೊದಲನೇ ಡೋಸ್ ಶೇಕಡಾ 70 ರಷ್ಟು ಮತ್ತು 2 ನೇ ಡೋಸ್ ಶೇಕಡಾ 30 ರಷ್ಟು ಸುರಕ್ಷಿತ ಹಾಗಾಗಿ ಇಲ್ಲಿಯವರೆಗೆ ಇವೆರಡೂ ಡೋಸ್ ಪಡೆದವರು ಕೊರೋನಾ ಬಂದರೂ ಮರಣಹೊಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ವಿಶ್ವರಾಧ್ಯ ಸಿದ್ದ ಸಂಸ್ಥಾನ ಅಬ್ಬೇತುಮಕೂರಿನ ಡಾ.ಗಂಗಾಧರ ಮಹಾಸ್ವಾಮಿ, ಪಶ್ಚಿಮಾದ್ರಿ ಸಂಸ್ಥಾನಮಠ ನೆರಡಗಂ ಶಾಖೆಯ ಪಂಚಮ ಸಿದ್ದಲಿಂಗ ಸ್ವಾಮಿ, ಹೆಡಗಿಮದ್ರಾ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ, ಸಿದ್ದಲಿಂಗೇಶ್ವರ ವಿರಕ್ತಮಠ ಕೋಡಾಲ್ ಪಂಚಮ ಸಿದ್ದಲಿಂಗಸ್ವಾಮಿ ,ಚೆನ್ನಬಸವ ಶಿವಾಚಾರ್ಯ ಸ್ವಾಮಿ ಕೆಂಭಾವಿ, ಯಾದಗಿರಿ ಭೀಮಾಸ್ವಾಮಿ ಶಿವಪಾರ್ವತಿ ಮಠದ ಶರಣರು ನಗನೂರ್, ಶಹಾಪುರ ಫಕೀರೇಶ್ವರ ಮಠದ ಗುರುಪಾದ ಸ್ವಾಮಿ, ಯಾದಗಿರಿ ಸೊಪ್ಪಿ ಮಠದ ಚೆನ್ನವೀರಸ್ವಾಮಿ, ಗುರುಮಿಠಕಲ್ ಸಣ್ಣ ಮಠದ ವೈಜನಾಥ ಹಿರೇಮಠ, ಶರಣು ಗದ್ದಿಗಿ, ಶಹಾಪುರ ಸೂಗುರೇಶ್ವರ ಶಿವಾಚಾರ್ಯ ಹಿರೇಮಠ, ತಿಂಥಿಣಿ ಮೌನೇಶ್ವರ ದೇವಸ್ಥಾನದ ಗಂಗಾಧರ ಸ್ವಾಮಿ, ಯಾದಗಿರಿ ಶಂಕರಲಿಂಗೇಶ್ವರ ದೇವಸ್ಥಾನದ ತಾಯಪ್ಪ, ಮೈಲಾಪೂರದ ಶರಣಪ್ಪ ಪೂಜಾರಿ, ಗಿರಿಮಲ್ಲಪ್ಪ ಪೂಜಾರಿ ಇನ್ನಿತರ ಮಠದ ಸ್ವಾಮೀಜಿಯವರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button