ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ರದ್ದು ಸಿಎಂ ನೇತ್ರತ್ವದ ಮಹತ್ವದ ಸಭೆ ಅಂತ್ಯ
ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ರದ್ದು ಸಿಎಂ ನೇತ್ರತ್ವದ ಮಹತ್ವದ ಸಭೆ ಅಂತ್ಯ
ಬೆಂಗಳೂರಃ ವೀಕೆಂಡ್ ಕರ್ಫ್ಯೂ ರಾಜ್ಯಾದ್ಯಂತ ರದ್ದು ಪಡಿಸುವ ಕುರಿತು ಕೋವಿಡ್ ಹಿನ್ನೆಲೆ ಸಿಎಂ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ಹೀಗಾಗಿ ಶನಿವಾರ ಮತ್ತು ರವಿವಾರ ಇದ್ದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಮಾಧ್ಯಮಕ್ಕೆ ತಿಳಿಸಿದರು.
ಆಸ್ಪತ್ರೆಗೆ ಸೇರುವ ರೋಗಿಗಳ ಸಂಖ್ಯೆ ಶೇ.5 ರಷ್ಟು ಇದೆ. ಈ ಕುರಿತು ಸಮಗ್ರ ಸಂಬಂಧಿಸಿದ ಎಲ್ಲಾ ವಿವಿಧ ಇಲಾಖೆ ಅಧಿಕಾರಿಗಳ ಮತ್ತು ವಿಶೇಷವಾಗಿ ತಜ್ಞರ ಸಲಹೆ ಸೂಚನೆ ಮೇರೆಗೆ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ.
ಆದರೆ ಉಳಿದದ್ದು, ಜಾತ್ರೆ, ಸಮಾರಂಭ ಎಲ್ಲವೂಗಳಿಗೆ ನಿಯಮಗಳು ಕಂಡಿಷನ್ ಮುಂದುವರೆಯಲಿದೆ. ಕಾರಣ ಓಮಿಕ್ರಾನ್ ತೀವ್ರತೆ ಇದೆ.
ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಐಸುಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಓಮಿಕ್ರಾನ್ ತೀವ್ರತೆ ಆಗುತ್ತದೆ. ಆದರೆ ಎಲ್ಲರೂ ಮಾಸ್ಕ್ , ಸ್ಯಾನ್ ಟೈಸರ್ ಉಪಯೋಗಿಸುವ ಮೂಲ ಗುಂಪು ಗುಂಪಾಗಿ ಸೇರದೆ ಎಚ್ಚರಿಕೆಯಿಂದ ಜನ ಜೀವನ ಸಾಗಿಸಬೇಕಿದೆ ಎಂದರು. ಉಳಿದಂತೆ 50:50 ಅನುಪಾದಲ್ಲಿ ನಿಯಮ ಜಾರಿ ಇರಲಿದೆ ಎಂದು ಅವರು ತಿಳಿಸಿದರು.