ಕಥೆವಿನಯ ವಿಶೇಷ

ಪಾಕಿಗಳ‌ ಪಾಲಿಗೆ ‘ಷೇರ್ ಶಾ’ ‌ಎಂದೇ‌ ಖ್ಯಾತಿ‌ ಯಾರಾತ.?

ಪಾಕಿಸ್ತಾನದ ಸೈನಿಕರ ಉಸಿರು ಬಿಗಿಯುವ ಹಾಗೆ ಹೋರಾಡಿದಂತಹ ಸೈನಿಕ ಯಾರು ಗೊತ್ತೆ..?

ವೈರಿಗಳ‌ ಸದೆ‌ ಬಡಿದು ಟೈಗರ್ ಹಿಲ್ಸ್  ವಶಪಡಿಸಿಕೊಂಡ ಟೈಗರ್

ಒ೦ದೋ ನಾನು ತ್ರಿವರ್ಣ ಧ್ವಜವೇರಿಸಿ ಬರುತ್ತೇನೆ, ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊಂದ್ದುಕೊಂಡು ಬರುವೆ ಎಂದು ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬಂದವೀರ ಯೋಧನ ಕಥೆ ಒ೦ದೋ ನಾನು ತ್ರಿವರ್ಣ ಧ್ವಜವೇರಿಸಿ ಬರುತ್ತೇನೆ, ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬರುವೆ ಎಂದು ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬಂದವೀರ ಯೋಧನ ಹೆಸರು ವಿಕ್ರಮ್ ಭಾತ್ರಾ.

ಆತ ಷೇರ್ ಶಾ ಅಂತಲೇ ಪ್ರಸಿದ್ಧಿ. ಆತನಿಗೆ ಷೇರ್ ಶಾ ಅಂತ ಬಿರುದು ಕೊಟ್ಟಿದ್ದು ನಮ್ಮ ಖಟ್ಟರ್ ವಿರೋಧಿಗಳಾದ ಪಾಕಿಸ್ತಾನಿಯರು.

ಪಾಕಿಸ್ತಾನಿಯರು ಬಿರುದು ಕೊಟ್ಟಿದ್ದಾರೆಂದರೆ ಈತ ಅವರಿಗೆ ಹೇಗೆ ತನ್ನ ತಾಕತ್ತನ್ನು ಪ್ರದರ್ಶಿಸಿರಬಹುದು ಎಂದು ಆಲೋಚಿಸಿ.ಷೇರ್ ಶಾ ವಿಕ್ರಮ್ ಭಾತ್ರಾ ಹುಟ್ಟಿದ್ದು 9 ಸೆಪ್ಟೆಂಬರ್ 1974 ಹಿಮಾಚಲ್ ಪ್ರದೇಶ್ ನ ಪಲಂಪುರ್ ಹತ್ತಿರದ ಘುಗ್ಗರ್ ಎಂಬ ಹಳ್ಳಿಯಲ್ಲಿ. ವಿಕ್ರಮ್ ನ ತಂದೆ ತಾಯಿ ಇಬ್ಬರೂ ಸರಕಾರಿ ನೌಕರರು.

ತಂದೆ ಶಾಲೆಯೊಂದರ ಮುಖ್ಯ ಶಿಕ್ಷಕ ಮತ್ತು ತಾಯಿ ಶಾಲೆಯೊಂದರ ಶಿಕ್ಷಕಿ. ಹಾಗೆ ನೋಡಿದರೆ ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರು ವಿಕ್ರಮ್ ಕೂಡಾ ಮನಸ್ಸು ಮಾಡಿದ್ದರೆ ಯಾವುದೋ ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಆರಾಮಾಗಿರಬಹುದಿತ್ತು.ಆದರೆ ವಿಕ್ರಮ್ ನ ದೇಶಪ್ರೇಮ ಅವನನ್ನು ಸೇನೆಗೆ ಕರೆದೊಯ್ತು.

ವಿಕ್ರಮ್ ಪ್ರಾಥಮಿಕ ಶಿಕ್ಷಣವನ್ನು ಓದಿದ್ದು ಪಲಂಪುರಿನ D.A.V. Public Schoolನಲ್ಲಿ. ನಂತರ ಓದಿದ್ದು Central School ಪಲಂಪುರ್ ನಲ್ಲಿ. B.Sc. ಪದವಿಯನ್ನು ಚಂಡೀಗರ್ ನ D.A.V. ಕಾಲೇಜಿನಲ್ಲಿ ಓದಿ ಅದೇ ಕಾಲೇಜಿನಲ್ಲಿ N.C.C (ಏರ್ವಿಂಗ್) ನಲ್ಲಿ ಅತ್ಯುತ್ತಮ ಉಮೇದುವಾರ ಎಂದು ಗುರಿತಿಸಿ ಕೊಂಡಿದ್ದರು.ಪದವಿ ಮುಗಿಸಿದ ವಿಕ್ರಮ್ ನಿಗೆ ಸೇನೆ ಸೇರುವ ಕನಸಿತ್ತು. ಅದಕ್ಕೆ ತಕ್ಕಂತೆ ದೇಶಭಕ್ತಿಉಕ್ಕಿ ಹರಿಯುತ್ತಿತ್ತು.

ಆತ N.C.C ಯಲ್ಲಿಗುರಿತಿಸಿಕೊಂಡಿದ್ದರಿಂದ ಸೇನಗೆ ಸೇರಲು ಅವಕಾಶ ಸಿಕ್ಕಿತು. ಆತನ ಇಚ್ಛೆಯಂತೆ1996 ರಲ್ಲಿ ಡೆಹರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಆಯ್ಕೆಯಾದ.13 ಜಮ್ಮು ಮತ್ತು ಕಾಶ್ಮಿರ ಕೋವಿಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡರು.

ಅಷ್ಟೇ ಬೇಗ ಕ್ಯಾಪ್ಟನ್ ಕೂಡಾ ಆದರು.ಅದೊಂದು ದಿನ ಹೋಳಿ ಹಬ್ಬವಿರುವುದರಿಂದ ಮನೆಯವರ ಜೊತೆ ಹೋಳಿ ಆಚರಿಸಲು ವಿಕ್ರಮ್ ಮನೆಗೆ ಹೋದ. ಸೇನೆಗೆ ಸೇರಿ 18 ತಿಂಗಳಾದರೂ ಮನೆಗೆ ಹೋಗಿರಲಿಲ್ಲ.

18 ತಿಂಗಳ ಬಳಿಕ ಮನೆಗೆ ಹೋದ. ತಂದೆ-ತಾಯಿ ಬಂಧು-ಬಳಗದೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದ. ಅದೊಂದು ದಿನ ಪಾಲಂಪುರದ ಒಂದು ಹೋಟೆಲ್ ಗೆ ಹೋಗಿದ್ದಾಗ ಒಂದು ಘಟನೆ ನಡೆಯಿತು.

ಹೋಟೆಲ್ ಗೆ ಹೋದಾಗ ಅಲ್ಲಿ ಪರಿಚಯದವರೊಬ್ಬರು ಮಾತನಾಡಿಸಿ ಹಾಗೇ ಯುದ್ಧದ ಬಗ್ಗೆ ಮಾತುಗಳು ಶುರುವಾದವು. ಯುದ್ಧ ಶುರುವಾಗಿದೆ. ಯಾವಾಗ ಬೇಕಾದರೂ ಮೇಲಿನ ಅಧಿಕಾರಿಗಳಿಂದ ನಿನಗೆ ಕರೆ ಬರಬಹುದು ಎಚ್ಚರಿಕೆಯಿಂದಿರು ಎಂದು ಹೇಳಿದರು.

ಅದಕ್ಕೆ ವಿಕ್ರಮ್ ಕೊಟ್ಟ ಉತ್ತರವೇನು ಗೊತ್ತಾ? ಒಂದೋ ಗೆದ್ದು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ, ಇಲ್ಲವೇ ಅದೇ ಧ್ವಜದಲ್ಲಿ ಸುತ್ತಿರುವ ನನ್ನ ಹೆಣ ಬರುತ್ತೆ ಅಂದು ಬಿಟ್ಟ.

ಆ ಸಂದರ್ಭದಲ್ಲಿ ನವಾಜ್ ಷರೀಫ್ ಭಾರತದ ಬೆನ್ನಿಗೆ ಚೂರಿ ಇರಿದಿದ್ದ. ವಾಜಪೇಯಿಯವರು ಪಾಕಿಸ್ತಾನದೊಂದಿಗೆ ಸಂಭಂದ ವೃದ್ಧಿಸಲು ಮಾಡಿದ ಎಲ್ಲಾ ಕಾರ್ಯಗಳು ವಿಫಲವಾದಂತಾಗಿದ್ದವು.

ಪಾಕಿಸ್ತಾನ ನಮಗೆ ಗೊತ್ತಿಲ್ಲದಂತೆ ಕಾರ್ಗಿಲ್ ನ ಬೆಟ್ಟ ಏರಿ ನಮ್ಮದೇ ಬಂಕರು ವಶ ಪಡಿಸಿಕೊಂಡು ಕೂತು ಬಿಟ್ಟಿತ್ತು. ಇದನ್ನು ತಿಳಿದುಕೊಳ್ಳಲು ಯೋಧ ಸೌರಬ್ ಕಾಲಿಯಾ ನೇತ್ರತ್ವದ ಆರು ಜನರ ತಂಡ ಕಾರ್ಗಿಲ್ ಬೆಟ್ಟವನ್ನೇರಿತು.

ಮರಳಿಯೂ ಬಂದರು ಆದರೆ ತುಂಡು ತುಂಡಾಗಿ ಮರಳಿದ್ದರು. ಪಾಕಿಸ್ತಾನ ಯೋಧ ಸೌರಬ್ ಕಾಲಿಯಾ ಸೇರಿದಂತೆ ಆರು ಜನ ಯೋಧರನ್ನು ಹಿಂಸಿಸಿ ತುಂಡು ತುಂಡಾಗಿ ಕತ್ತರಿಸಿ ನಮ್ಮ ಸೇನೆಗೆ ಕಳುಹಿಸಿತ್ತು. ಅಲ್ಲಿಗೆ ಸೈನಿಕರ ಮತ್ತು ಪ್ರಧಾನಿ ವಾಜಪೇಯಿಯವರ ತಾಳ್ಮೆಯ ಕಟ್ಟೆ ಒಡೆದಿತ್ತು. ಆಗಲೇ “ಆಪರೇಶನ್ ವಿಜಯ್” ಶುರುವಾಗಿತ್ತು.

ಆ ಹೋಟೆಲ್ ನಲ್ಲಿ ಪರಿಚಿತ ವ್ಯಕ್ತಿ ಹೇಳಿದಂತೆ ವಿಕ್ರಮ್ ಬಾತ್ರಾರವರಿಗೆ, ಜೂನ್ 1, 1999 ರಂದು ಕಾರ್ಗಿಲ್ ನಲ್ಲಿ ಸೇವೆಗೆ ಹಾಜರಾಗಬೇಕೆಂದು ಸೇನೆಯಿಂದ ಆದೇಶ ಬಂದಿತ್ತು. ತಡಮಾಡದೇ ಮನೆಯಿಂದ ಹೊರಟೇ ಬಿಟ್ಟ ವಿಕ್ರಮ. ಹೋದೊಡನೆ 17 ಸಾವಿರ ಅಡಿ ಎತ್ತರದಲ್ಲಿರುವ ಶಿಖರವದು ಅದರ ಹೆಸರು ಟೈಗರ್ ಹಿಲ್.

ಆ ಶಿಖರವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿ ಲೆಫ್ಟಿನೆಂಟ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಸಂಜೀವ್ ಜಾಮ್ವಾಲ್ ಗೆ ನೀಡಲಾಗಿತ್ತು. ಅದರಂತೆ ವಿಕ್ರಮ್ ಯೋಜನೆ ಹಾಕಿದ.

ಆ ಯೋಜನೆಯಂತೆ ಕಡಿದಾದ ಭಾಗದ ಮೂಲಕ ಶಿಖರವನ್ನೇರುವಂತೆ ತಮ್ಮ ಸಂಗಡಿಗರಿಗೆ ನಿರ್ದೇಶನ ನೀಡಿದ ಬಾತ್ರಾ, ತಾನು ಹಿಂದಿನಿಂದ ದಾಳಿ ಮಾಡಲು ನಿರ್ಧರಿಸಿದ.

ಮುಂದಿನಿಂದ ವಿಕ್ರಮನ ತಂಡ ದಾಳಿ ಮಾಡಿತು, ಹಿಂದಿನಿಂದ ವಿಕ್ರಮ್ ದಾಳಿ ಮಾಡಿದ. ಬೆಳಗಾಗುವಷ್ಟರಲ್ಲಿ ಶತ್ರುಗಳು ಹೆಣವಾಗಿದ್ದರು.

ಆ ಶಿಖರ ನಮ್ಮ ಕೈ ವಶವಾಗಿತ್ತು. ಆ ಬೆಟ್ಟವನ್ನು ವಶಪಡಿಸಿಕೊಂಡು ಕೆಳಗಿಳಿದು ಬಂದ ವಿಕ್ರಮ್ ಭಾತ್ರಾ ಟಿ.ವಿ ಚಾನೆಲ್ ಗಳಲ್ಲಿಕಾಣಿಸಿಕೊಂಡ. ಪತ್ರಿಕೆಗಳಲ್ಲಿ ಆತನದ್ದೇ ಗುಣಗಾನ.

ವಿಕ್ರಮ್ ತಾನು ವಶಪಡಿಸಿಕೊಂಡಿರುವ ಬೆಟ್ಟದ ಬಗ್ಗೆ ಹೇಳಲು ತನ್ನ ತಂದೆಗೆ ಕರೆ ಮಾಡಿ , ಅಪ್ಪಾ ಶತ್ರುವಿನ ನೆಲೆಯನ್ನು ವಶಪಡಿಸಿಕೊಂಡಿದ್ದೇನೆ’ ಎಂದಾಗ, ಅದು ತಮ್ಮ ಜೀವಮಾನದ ಅತ್ಯಂತ ಹೆಮ್ಮೆಯ ಕ್ಷಣ ಎಂದು.ಎಲ್.ಬಾತ್ರಾ ಖುಷಿ ಪಟ್ಟಿದ್ದರು. ಬೆಟ್ಟ ಇಳಿದು ಕೆಳಬಂದ ವಿಕ್ರಮನಿಗೆ ಅಧಿಕಾರಿಗಳಿಂದ ಮತ್ತೆ ಕರೆ ಬಂತು. ಮತ್ತೊಂದು ಕಾರ್ಯಾಚರಣೆ ಮಾಡಲು ಅಧಿಕಾರಿಗಳು ಕರೆ ಮಾಡಿದ್ದರು.

ಮತ್ತೆ ವಿಕ್ರಮ್ ಸನ್ನದ್ಧಾದ. ಆಗ ಮಾಧ್ಯಮದವರು ಮತ್ತೆ ನೀವು ಕಾರ್ಯಾಚರಣೆಗೆ ಹೋಗುತ್ತೀದ್ದೀರಲ್ಲ ಈ ಕ್ಷಣದಲ್ಲಿ ನಿನ್ನ ಮನದಲ್ಲೇನಿದೆ? ಎಂದು ಪ್ರಶ್ನಿಸಿದರು.

ಆಗ ವಿಕ್ರಮ್ ಹೇಳಿದ ನನಗೆ ಒಂದೇ ಬೆಟ್ಟ ಗೆದ್ದು ಸಾಕಾಗಿಲ್ಲ ಇನ್ನೊಂದಿಷ್ಟು ಬೆಟ್ಟಗಳನ್ನು ಗೆದ್ದು ಬರುವೆ (ಏ ದಿಲ್ ಮಾಂಗೆ ಮೋರ್) ಎಂದು ಹೊರಟೇಬಿಟ್ಟ. ಆ ಹೊತ್ತಿಗೆ ವಿಕ್ರಮ್ ಪಾಕಿಗಳ ಪಾಲಿಗೆ ಷೇರ್ ಶಾ ಎಂದೇ ಪ್ರಸಿದ್ಧಿಯಾಗಿದ್ದ.

ಅವನ ತಾಕತ್ತಿಗೆ ಪಾಕಿಗಳೇ ಷೇರ್ ಶಾ ಎಂದು ಕೋಡ್ ವರ್ಡ್ ಆಗಿ ಕರೆಯುತ್ತಿದ್ದರು. ಅಧಿಕಾರಿಗಳಆದೇಶದ ಪ್ರಕಾರ ವಿಕ್ರಮ್ ಗೆ ಮತ್ತೊಂದು ಬೆಟ್ಟವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು‌.ವಿಕ್ರಮ್ ಸನ್ನದ್ಧನಾಗಿ ಕಾರ್ಯಾಚರಣೆಗೆ ಯೋಜನೆ ರೂಪಿಸಿತನ್ನ ತಂಡದೊಂದಿಗೆ ಹೊರಟೇಬಿಟ್ಟ.

ಜುಲೈ 8ರ ರಾತ್ರಿವಿಕ್ರಮ್ ಮತ್ತು ಮತ್ತೊಬ್ಬ ಯುವ ಸೇನಾಧಿಕಾರಿ ಅನೂಜ್ ನಯ್ಯರ್ ಶತ್ರುಗಳ ಮೇಲೆ ದಾಳಿ ಆರಂಭಿಸಿದರು. ಶಿಖರದ ಪ್ರತಿ ಹಂತದಲ್ಲೂ ಇದ್ದ ಶತ್ರುಗಳ ಬಂಕರುಗಳನ್ನು ನಾಶಪಡಿಸುತ್ತಲೇ ಸಾಗಿದರು.

ಆ ಸಂದರ್ಭದಲ್ಲಿ ಶತ್ರುಗಳು ನಡೆಸಿದ ಸ್ಫೋಟದಲ್ಲಿ ಒಬ್ಬ ಕಿರಿಯ ಅಧಿಕಾರಿಯ ಕಾಲುಗಳಿಗೆ ತೀವ್ರ ಗಾಯಗಳಾದವು. ಆತನನ್ನು ಬಂಕರ್ ಗೆ ಎತ್ತಿಕೊಂಡು ಬರುವೆ ಎಂದು ಸನಿಹದಲ್ಲೇ ಇದ್ದ ಸುಬೇದಾರ್ ಹೇಳಿದರು ಆದರೆ ವಿಕ್ರಮ್ ಒಪ್ಪಲಿಲ್ಲ.

ನಿನಗೆ ಮಕ್ಕಳಿದ್ದಾರೆ, ದೂರ ಸರಿ ಎಂದು ತಾನೇ ಹೊರಟುನಿಂತ. ಹೆಜ್ಜೆ ಮುಂದೆ ಇಡುವಾಗಲೇ ಶತ್ರುಗಳು ಗುಂಡಿನ ದಾಳಿ ಮಾಡಿದರು ಆಗ ಒಂದು ಗುಂಡು ವಿಕ್ರಮನ ಎದೆಯನ್ನೇ ಹೊಕ್ಕಿತು! ಇನ್ನೊಂದು ಗುಂಡು ಸೊಂಟವನ್ನು ಸೀಳಿತು.

ಆದರೂ ನೆಲಕ್ಕುರುಳುವ ಮುನ್ನ ಭಾತ್ರಾ ಬಂದೂಕು ಐವರು ಭಯೋತ್ಪಾದಕರನ್ನು ಕೊಂದಿತ್ತು.ಬೆಳಗಾಗುವಷ್ಟರಲ್ಲಿ ಶಿಖರವೇನೋ ಕೈವಶವಾಯಿತು.

ಆದರೆ ಷೇರ್ ಶಾ ವೀರ ಮರಣವನ್ನು ಹೊಂದಿದ್ದ.ಷೇರ್ ಶಾ ವಿಕ್ರಮನ ಕ್ಷಾತ್ರ ತೇಜಸ್ಸಿಗೆ ಸೇನೆಯ ಪರಮೋಚ್ಛ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನು ನೀಡಿ ಸರ್ಕಾರ ಗೌರವಿಸಿತು.ಇಂತಹ ವೀರಯೋಧರ ಬಲಿದಾನಗಳಿಂದಲೇ ನಾವಿಂದು ಆರಾಮಾಗಿದ್ದೇವೆ.

ಅವರನ್ನು ನೆನಪಿಸಿಕೊಳ್ಳವುದು,ಅವರಿಗೆ ಗೌರವಿಸೋದು ನಮ್ಮ ಕರ್ತವ್ಯ. ಈ ಲೇಖನವನ್ನು ಓದಿದ ಮೇಲೆ ಎರಡು ಹನಿ ಕಣ್ಣೀರು ಸುರಿಸಿಬಿಡಿ.

ಅದೇ ನಾವು ಸೈನಿಕರಿಗೆ ಕೊಡುವ ದೊಡ್ಡ ಗೌರವ. ನಮ್ಮಿಂದ ಗಡಿಗೆ ಹೋಗಿ ಹೋರಾಡಿ ಸಾಯೋದಕ್ಕಂತೂ ಆಗಲ್ಲ ಅದಕ್ಕಾಗಿ ದೇಶಕ್ಕಾಗಿ ಬದುಕೋಣ. ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ನೆನೆಯೋಣ. ವೀರ ಯೋಧರ ಬಗ್ಗೆ ದಿನಕ್ಕೆ ಒಂದು ಸಾರಿಯಾದರೂ ನೆನಪಿಸಿಕೊಳ್ಳಿ. ಅಳು ಬಂದರೆ ಅತ್ತು ಬಿಡಿ , ಅತ್ತು ಬಿಡಿ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button