ವೀರಶೈವ ಲಿಂಗಾಯತರು ಕೊಡುಗೈದಾನಿಗಳು-ಖಂಡ್ರೆ
ಮಾದರಿಯಾಗಿರಲಿ ವೀರಶೈವ ಸಮಾಜಃ ಖಂಡ್ರೆ
ವೀರಶೈವ ಲಿಂಗಾಯತ ಸಮುದಾಯವು ಮೊದಲಿನಿಂದಲೂ ಎಲ್ಲಾ ಧರ್ಮ, ಜಾತಿ, ಜನಾಂಗದ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಾ ಬಂದಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆಯವರು ಅಭಿಪ್ರಾಯಪಟ್ಟರು.
ಶುಕ್ರವಾರ ಯಾದಗಿರಿ ಜಿಲ್ಲಾ ಅಖಿ ಭಾರತ ಜಿಲ್ಲಾ ವೀರಶೈವ ಮಹಾಸಭಾ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಗದ್ಗುರು ಪಂಚಪೀಠಾದೀಶ್ವರ ಮತ್ತು ಬಸವಾದಿ ಶರಣರ ಅನುಯಾಯಿಗಳು ಸಮಗ್ರ ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಗ್ಗಟಿನಿಂದ ನಡೆದುಕೊಳ್ಳಬೇಕು. ಒಳ ಪಂಗಡಗಳ ಬೇದ ಸಲ್ಲದು. ನಮ್ಮ ಸಮುದಾಯದ ಹಿರಿಯರು ಗುರಿಮುಟ್ಟಿ ಸಮಾಜಕ್ಕೆ ಗುರುವಾಗಿ ಬಾಳಿ ಆದರ್ಶವಾಗಿ ಬಾಳಿ ಬದುಕಿದ್ದಾರೆ.
ಬಹುಕಾಲದ ಐತಿಹ್ಯವುಳ್ಳ, ಸಮಾಜಕ್ಕೆ ಮಾದರಿಯಾಗಿ ಬದುಕಿದ ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕøತಿ, ಪರಂಪರೆಯನ್ನು ಮುಂದುವರೆಸಬೇಕಾದ ಗುರುತರ ಜವಾಬ್ದಾರಿ ಸಮುದಾಯದ ಯುವಕರ ಮೇಲೆ ಇದೆ ಎಂದರು.
ವೀರಶೈವ ಲಿಂಗಾಯತರು ಕೊಡುಗೈದಾನಿಗಳು
ಪ್ರಸ್ತುತ ದೇಶ ಕೊರೋನಾ ಆತಂಕದಲಿದೆ. ಇಂತಹ ಸಂದರ್ಭ ಕಷ್ಟದಲ್ಲಿರುವವರಿಗೆ ವೀರಶೈವ ಲಿಂಗಾಯತ ಸಮುದಾಯದಿಂದ ಸಹಾಯ ಮಾಡುವ ಕೆಲಸ ಬೇಕು ಎಂದ ಖಂಡ್ರೆ ಅವರು, ವೀರಶೈವ ಲಿಂಗಾಯತರು ಯಾವತ್ತೂ ಕೊಡುಗೈ ದಾನಿಗಳು ಎಂಬುದನ್ನು ಮರೆಯಬಾರದು. ಒಗ್ಗಟ್ಟಿನೊಂದಿಗೆ ಸಮುದಾಯದ ಪೋಷಣೆಯ ಜೊತೆಗೆ ಇತರರಿಗೂ ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ಖಂಡ್ರೆ ಅವರಿಗೆ, ಸೋಮಶೇಖರ ಮಣ್ಣೂರು ಮತ್ತು ತಂಡದವರಿಂದ ಬಸವ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವೀರಣ್ಣ ರಾಖಾ, ಬಸವರಾಜ ರಾಜಾಪುರ, ಎಸ್. ಬಿ. ರಾಖಾ, ಡಾ. ಜಗದೀಶ್ ನೂಲಿನವರ, ಇಂದುದರ ಶಿನ್ನೂರ , ಅವಿನಾಶ್ ಜಗನ್ನಾಥ ಮತ್ತು ಸಮಾಜದ ಯುವ ಮುಖಂಡರು ಉಪಸ್ಥಿತರಿದ್ದರು.