“ವಿಧಿ ಲಿಖಿತ” ಕಥೆ ಓದಿ

ದಿನಕ್ಕೊಂದು ಕಥೆ
ವಿಧಿ ಲಿಖಿತ
ಒಂದು ಗ್ರಾಮದಲ್ಲಿ ರಾಮಣ್ಣ ಸೋಮಣ್ಣ ಎಂಬ ಇಬ್ಬರು ಸ್ನೇಹಿತರಿದ್ದರು. ಕೂಲಿ ಮಾಡಿ ಜೀವಿಸುತ್ತಿದ್ದರು. ಪೇಟೆಗೆ ಹೋಗಿ ಸಂಪಾದನೆ ಮಾಡಬೇಕೆಂದು ಆಲೋಚಿದರು. ರೊಟ್ಟಿ ಬುತ್ತಿ ಕಟ್ಟಿಕೊಂಡು ಹೊರಟರು. ಹೀಗೆ ಹೋಗುತ್ತ ಇರುವಾಗ ಒಬ್ಬ ಸನ್ಯಾಸಿ ಸಿಕ್ಕಿದ. ಅವನು ಅವರನ್ನು ಕುರಿತು ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವಿದೆ. ಅದರ ಆಚೆಗೆ ಒಂದು ಪಾಳು ಬಾವಿ ಇದೆ. ಅದರಲ್ಲಿ ನಿಧಿ ಇದೆ. ತೆಗೆದು ಕೊಳ್ಳಿ ಎಂದು ಹೇಳಿದನು.
ಇಬ್ಬರೂ ಹೋಗಿ ದೇವಸ್ಥಾನದಲ್ಲಿ ಮಲಗಿದರು. ಅವರು ಮಲಗಿದ್ದಾಗ ಒಬ್ಬೊಬ್ಬರೂ ಅವರವರ ರೊಟ್ಟಿಗೆ ವಿಷಬೆರೆಸಿದರು. ಆದರೆ ಇಬ್ಬರಿಗೂ ವಿಷ ಬೆರೆಸಿದ್ದು ತಿಳಿಯಿತು. ಆ ರೊಟ್ಟಿಗಳನ್ನು ಅಲ್ಲೇ ಬಿಟ್ಟು ಪಾಳು ಬಾವಿಯ ಹತ್ತಿರ ಹೋಗಿ ನೋಡಿದಾಗ ಅಲ್ಲಿ ನಿಧಿಯಿರಲಿಲ್ಲ.
ಸನ್ಯಾಸಿ ಹೇಳುವಾಗ ಇಬ್ಬರು ಕಳ್ಳರು ಕೇಳಿಸಿಕೊಂಡಿದ್ದರು. ಅವರೂ ಅದೇ ದೇವಸ್ಥಾನದಲ್ಲಿದ್ದು ಇವರಿಬ್ಬರಿಗಿಂತ ಮುಂಚೆ ಹೋಗಿ ನಿಧಿಯನ್ನು ತೆಗೆದುಕೊಂಡು ಮತ್ತೆ ದೇವಸ್ಥಾನಕ್ಕೆ ಬಂದರು. ಅಲ್ಲಿದ್ದ ರೊಟ್ಟಿಗಳನ್ನು ತಿಂದು ಸತ್ತರು. ಆ ಬಡವರಿಬ್ಬರೂ ಮರಳಿ ದೇವಸ್ಥಾನಕ್ಕೆ ಬಂದಾಗ ನಿಧಿ ಅವರಿಗೆ ಸಿಕ್ಕಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.