ಮಾ.9 ರಂದು ನಗರಕ್ಕೆ ವಿಜಯ ಸಂಕಲ್ಪ ಯಾತ್ರೆ – ಅಮೀನರಡ್ಡಿ ಯಾಳಗಿ
ಶಹಾಪುರದಲ್ಲಿ ಬಿಜೆಪಿ ರೋಡ್ ಶೋ - BSY, ಸಿಎಂ ಬೊಮ್ಮಾಯಿ & ಟೀಂ
ಮಾ.9 ರಂದು ನಗರಕ್ಕೆ ವಿಜಯ ಸಂಕಲ್ಪ ಯಾತ್ರೆ – ಅಮೀನರಡ್ಡಿ ಯಾಳಗಿ
ಶಹಾಪುರದಲ್ಲಿ ಬಿಜೆಪಿ ರೋಡ್ ಶೋ – BSY, ಸಿಎಂ ಬೊಮ್ಮಾಯಿ & ಟೀಂ
ಶಹಾಪುರಃ ಇದೇ ಮಾ.9 ರಂದು ನಗರಕ್ಕೆ ಬಿಜೆಪಿಯ ವಿಜಯ ಸಂಕಲ್ಪ ರಥ ಯಾತ್ರೆ ಆಗಮನವಾಗಲಿದ್ದು, ಮಾಜಿ ಸಿಎಂ ರಾಷ್ಟ್ರೀಯ ನಾಯಕರೂ ಆದ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಭಗವಂತ ಖೂಬಾ ಸೇರಿದಂತೆ ಸಚಿವರು, ಶಾಸಕರು ಯಾತ್ರೆಯಲ್ಲಿ ಭಾಗವಹಿಸಲಿದ್ದು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮೂಲಕ ರಾಜ್ಯದ ಆಡಳಿತ ಚುಕ್ಕಾಣಿ ಹಿಡಯುವ ವಿಜಯಿ ಯಾತ್ರೆ ಮುಂದುವರೆಸುವಂತೆ ಜನತೆ ಆಶೀರ್ವಾದ ಮಾಡುತ್ತಿದ್ದು, ಈ ಬಾರಿ ಶಹಾಪುರ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.
Read daily updates about Diana Bhavishaya
ವಿಜಯ ಸಂಕಲ್ಪ ಯಾತ್ರೆ ಸಾಗುವ ಮಾರ್ಗ
ಅಂದು ಬೆಳಗ್ಗೆ 9-30 ಕ್ಕೆ ಭೀ.ಗುಡಿ ಹೆಲಿಪ್ಯಾಡಗೆ ಸಿಎಂ ಬೊಮ್ಮಾಯಿ ಆಗಮಿಸಲಿದ್ದು, ಅಲ್ಲಿಂದ ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆ ಆಗಮಿಸಿ ದರ್ಶನ ಪಡೆದು ಉಪಹಾರ ಸೇವಿಸಲಿದ್ದಾರೆ. ಗದ್ದುಗೆ ಯಲ್ಲಿಯೇ ಸುದ್ದಿಗೋಷ್ಟಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿಂದ ನಗರದ ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ ಬುದ್ಧ ನಗರದ ಡಾ.ಅಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತಿದೆ.
ಸಿಬಿ ಕಮಾನ್ ಮೂಲಕ ಭೀಮರಾಯನ ಗುಡಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಗೋಗಿ ಡಾ.ಅಂಬೇಡ್ಕರ್ ಪ್ರತಿಮೆ ಹಾಗೇ ಮುಂದೆ ಕೆಂಭಾವಿಗೆ ತರಳಲಿದ್ದಾರೆ ಡಂದು ಯಾಳಗಿ ಅವರು ಮಾಹಿತಿ ನೀಡಿದ್ದಾರೆ.