Home
ಶಹಾಪುರಃ ಸಿಲೆಂಡರ್ ಸ್ಪೋಟ ಭೀಕರ ದುರಂತ

ಶಹಾಪುರಃ ಸೀಮಂತ ಕಾರ್ಯಕ್ರಮದಲ್ಲಿ ಸಿಲೆಂಡರ್ ಸ್ಪೋಟ 20 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ದೋರನಹಳ್ಳಿಯಲ್ಲಿ ಭೀಕರ ದುರಂತ
ಶಹಾಪುರಃ ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲೆಂಡರ್ ಸ್ಪೋಟ ಗೊಂಡ ಪರಿಣಾಮ 20 ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡ ಭೀಕರ ದುರಂತ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
20 ಕ್ಕೂ ಹೆಚ್ಚು ಜನರ ಮೈಯೆಲ್ಲ ಸುಟ್ಟಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ನಿವೃತ್ತ ನೌಕರ ಸಾಯಬಣ್ಣ ಹಗರಟಿಗಿ ಅವರ ಮನೆಯಲ್ಲಿ ಸಿಮಂತ ಕಾರ್ಯಕ್ರಮದ ಶುಭಸಂದರ್ಭದಲ್ಲಿ ದರ್ಘಟನೆ ನಡೆದಿರುವುದು. ಇಡಿ ಗ್ರಾಮ ಕಣ್ಣೀರು ಸುರಿಸುವಂತಾಗಿದೆ.
ಸಣ್ಣ ಮಕ್ಕಳು ಸೇರಿದಂತೆ ಹಲವರಿಗೆ ಬೆಂಕಿ ಆವರಿಸಿ ನರಳುತ್ತಿರುವ ಚಿತ್ರಣ ನಗರ ಆಸ್ಪತ್ರೆ ಮುಂದೆ ಕಂಡು ಬರುತ್ತಿದೆ. ದುರ್ಘಟನೆ ಕಂಡು ಜನರ ರೋದನ ಮುಗಿಲು ಮುಟ್ಟಿದೆ.